ಮಹಿಳಾ ಫುಟ್ಬಾಲ್ ಲೀಗ್ ಗೆ ಸೌದಿ ಅರೇಬಿಯಾ ಸಿದ್ಧತೆ

Prasthutha|

- Advertisement -

ಮಹಿಳಾ ಫುಟ್ಬಾಲ್ ಲೀಗ್ ಗೆ ಸೌದಿ ಅರೇಬಿಯಾ ಸಿದ್ಧತೆ ನಡೆಸಿದೆ. 24 ತಂಡಗಳ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಸೌದಿ ಮಹಿಳಾ ಫುಟ್ಬಾಲ್ ಲೀಗ್ (WFL) ವಿಜೇತರಿಗೆ ಚಾಂಪಿಯನ್ಸ್ ಟ್ರೋಫಿ ಮತ್ತು ಐದು ಲಕ್ಷ ಸೌದಿ ರಿಯಾಲ್ (ಒಂದೂವರೆ ಲಕ್ಷ ಡಾಲರ್) ನಗದು ಬಹುಮಾನ ಸಿಗಲಿದೆ. ಸುಮಾರು 600 ಆಟಗಾರರು ಸ್ಪರ್ಧೆಯ ಭಾಗವಾಗಲಿದ್ದಾರೆ. ಜಿದ್ದಾ, ರಿಯಾದ್ ಮತ್ತು ದಮ್ಮಾಮ್ ಸೇರಿದಂತೆ ಪ್ರಮುಖ ನಗರಗಳು ಪಂದ್ಯಾಟದಲ್ಲಿ ಭಾಗವಹಿಸಲಿದೆ.

ಮಹಿಳಾ ಲೀಗ್ ಪಂದ್ಯಾವಳಿಯ ಘೋಷಣೆಯೊಂದಿಗೆ ಸ್ಪರ್ಧೆಗೆ ವಿಶ್ವದಾದ್ಯಂತದ ದೊಡ್ಡ ಬೆಂಬಲ ವ್ಯಕ್ತವಾಗಿದೆ. ಈ ನಿರ್ಧಾರವು ಒಂದು ದೊಡ್ಡ ಹೆಜ್ಜೆಯಾಗಿದೆ ಮತ್ತು ಹೆಚ್ಚಿನ ಮಹಿಳೆಯರನ್ನು ಫುಟ್‌ಬಾಲ್‌ಗೆ ಕರೆತರಲು ಸಹಾಯ ಮಾಡುತ್ತದೆ ಎಂದು ಸೌದಿ ಫುಟ್‌ಬಾಲ್ ತಂಡದ ತರಬೇತುದಾರ ಅಬ್ದುಲ್ಲಾ ಅಲ್‌ಯಾಮಿ ಹೇಳಿದ್ದಾರೆ. ಮಾರ್ಚ್‌ನಲ್ಲಿ ಪ್ರಾರಂಭವಾಗಬೇಕಿದ್ದ ಪಂದ್ಯಾವಳಿಯನ್ನು ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು. ಮಹಿಳೆಯರು ಆಟಗಾರರಾಗಿ ಮಾತ್ರವಲ್ಲದೆ ಸೌದಿ ಮಹಿಳಾ ಫುಟ್ಬಾಲ್ ಲೀಗ್ (WFL)ಯ ಪದಾಧಿಕಾರಿಗಳಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.



Join Whatsapp