ಬೆಂಗಳೂರು: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧದ ಕುರಿತು ಪೊಲೀಸ್ ಮಹಾನಿರ್ದೇಶಕರು ಆದೇಶಿಸಿದ ಯಾವುದೇ ಸುತ್ತೋಲೆಗಳನ್ನು ಹೊರಡಿಸಲಾಗಿಲ್ಲ ಎಂದು ಕರ್ನಾಟಕ ಪೊಲೀಸ್ ನ ಫ್ಯಾಕ್ಟ್ ಚೆಕ್ ವೆಬ್ ಸೈಟ್ ಪ್ರಕಟಿಸಿದೆ.
ಕಿಡಿಗೇಡಿತನದಿಂದ ಸುತ್ತೋಲೆಯನ್ನು ಬಿಡುಗೊಡೆಗೊಳಿಸಲಾಗಿದ್ದು ಸಾರ್ವಜನಿಕರು ಅದಕ್ಕೆ ಗಮನ ಕೊಡಬಾರದು ಎಂದು ಪ್ರಕಟನೆ ತಿಳಿಸಿದೆ.
“ಮೇಲಾಧಿಕಾರಿಗಳ ಯಾವುದೇ ದೃಢೀಕರಣವಿಲ್ಲದ ಎಲ್ಲಾ ಪೊಲೀಸ್ ಆಯುಕ್ತರುಗಳು ಮತ್ತು ವರಿಷ್ಠಾಧಿಕಾರಿಗಳನ್ನುದ್ದೇಶಿಸಿದ ಈ ಪತ್ರವನ್ನು ಕಿಡಿಗೇಡಿತನದಿಂದ ಬಿಡುಗಡೆಗೊಳಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿವರಿಸಲಾದಂತೆ ಮಸೀದಿಗಳಿಂದ ಧ್ವನಿ ವ್ಯವಸ್ಥೆಯನ್ನು ತೆರವುಗೊಳಿಸುವುದಕ್ಕಾಗಿ ಇಂತಹ ಯಾವುದೇ ಸೂಚನೆಯನ್ನು ನೀಡಲಾಗಿಲ್ಲ. ಈ ಕುರಿತು ತನಿಖೆಯು ನಡೆಯುತ್ತಿದ್ದು ಇಂತಹ ಯಾವುದೇ ವದಂತಿ ಗಳಿಗೆ ಕಿವಿಗೊಡಬಾರದು” ಎಂದು ಕರ್ನಾಟಕ ರಾಜ್ಯ ಪೊಲೀಸ್ ನ ಫ್ಯಾಕ್ಟ್ ಚೆಕ್ ವೆಬ್ ಸೈಟ್ ಪ್ರಕಟಿಸಿದೆ.