ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಪ್ರೊ. ಇಮ್ರಾನ್ ಅಲಿ ದೇಶದಲ್ಲೇ ನಂ.1 ವಿಜ್ಞಾನಿ | ಜಾಗತಿಕ ಮಟ್ಟದಲ್ಲಿ 24ನೇ ಸ್ಥಾನ

Prasthutha|

ನವದೆಹಲಿ : ಸ್ಟಾನ್ ಪೋರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಸಿದ್ಧಪಡಿಸಿರುವ ಅನಾಲಿಟಿಕಲ್ ಕೆಮೆಸ್ಟ್ರಿ ವಿಭಾಗದಲ್ಲಿ ಭಾರತದಲ್ಲಿ ನಂ.1 ವಿಜ್ಞಾನಿಯಾಗಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಕೆಮೆಸ್ಟ್ರಿ ವಿಭಾಗದ ಪ್ರೊ. ಇಮ್ರಾನ್ ಅಲಿ ಅವರನ್ನು ಗುರುತಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಅವರು 24ನೇ ಸ್ಥಾನವನ್ನು ಪಡೆದಿದ್ದಾರೆ.

ಜಾಗತಿಕ ಖ್ಯಾತಿಯ ಪಿಎಲ್ ಒಎಸ್ ಬಯೋಲಜಿ ಜರ್ನಲ್ ನಲ್ಲಿ ಈ ವಿಷಯ ಪ್ರಕಟವಾಗಿದೆ. ವಿವಿಧ ವಿಜ್ಞಾನ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ವಿಜ್ಞಾನಿಗಳಲ್ಲಿ ಟಾಪ್ ವಿಜ್ಞಾನಿಗಳ ಪಟ್ಟಿಯನ್ನು ಜರ್ನಲ್ ಪ್ರಕಟಿಸಿದೆ. ಸುಮಾರು 68,80,389 ವಿಜ್ಞಾನಿಗಳ ಹೆಸರನ್ನು ಪ್ರಕಟಿಸಲಾಗಿದೆ.

- Advertisement -

ಸುಮಾರು 60 ಲಕ್ಷ ಜಾಗತಿಕ ವಿಜ್ಞಾನಿಗಳ ಪೈಕಿ ಶೇ.2 ಸ್ಥಾನದಲ್ಲಿರುವ ವಿಜ್ಞಾನಿಗಳ ಪೈಕಿ ಪ್ರೊ. ಇಮ್ರಾನ್ ಅಲಿ ಭಾರತದಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಪ್ರೊ. ಅಲಿ ಅವರನ್ನು ಹೊರತುಪಡಿಸಿ ಐಎನ್ ಎಸ್ ಎ ಹಿರಿಯ ವಿಜ್ಞಾನಿ ಪ್ರೊ. ಫೈಜಾನ್ ಅಹಮದ್ ಭಾರತದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಈ ಪಟ್ಟಿಯಲ್ಲಿ ಆಯ್ಕೆಯಾದ ಇತರ ವಿಜ್ಞಾನಿಗಳು ಮತ್ತು ಅವರ ಭಾರತದ ರ್ಯಾಂಕ್ ಗಳು ಈ ಕೆಳಗಿನಂತಿವೆ.

ಪ್ರೊ. ಮೊಹಮ್ಮದ್ ಸಮಿ – 10 ನೇ ರ್ಯಾಂಕ್

ಪ್ರೊ. ಅಂಜನ್ ಆನಂದ ಸೇನ್ – 31 ನೇ ಯಾಂಕ್

ಪ್ರೊ. ಶರೀಫ್ ಅಹಮದ್ – 104ನೇ ರ್ಯಾಂಕ್

ಪ್ರೊ. ಹಬೀಬ್ ಎಹ್ಸಾನ್ – 377 ರ್ಯಾಂಕ್

ಪ್ರೊ. ಸುಶಾಂತ್ ಘೋಷ್ – 782ನೇ ರ್ಯಾಂಕ್

ಪ್ರೊ. ತಬ್ರೇಝ್ ಖಾನ್ – 831ನೇ ರ್ಯಾಂಕ್

ಪ್ರೊ. ರಫೀಕ್ ಅಹಮದ್ – 1182ನೇ ರ್ಯಾಂಕ್

ಪ್ರೊ. ಆತಿಕ್ ರಹಮಾನ್ – 1219ನೇ ರ್ಯಾಂಕ್

ಡಾ. ಅಬಿದ್ ಹಲೀಮ್ – 1422ನೇ ರ್ಯಾಂಕ್

ಡಾ. ಅರುಣ್ ಕುಮಾರ್ – 1540ನೇ ರ್ಯಾಂಕ್

ಪ್ರೊ. ತೊಕೀರ್ ಅಹಮದ್ – 1687ನೇ ರ್ಯಾಂಕ್

ಡಾ. ಇಮ್ತಿಯಾಝ್ ಹಸನ್ – 1746ನೇ ರ್ಯಾಂಕ್     

- Advertisement -