ಬ್ರಿಟನ್ ನ ಬಹುದೊಡ್ಡ ಕುಟುಂಬ ಎಂಬ ಖ್ಯಾತಿಗೆ ಪಾತ್ರರಾಗಿರುವ ಸ್ಯೂ ರಾಡ್ಫೋರ್ಡ್ ಹಾಗೂ ಆಕೆಯ ಪತಿ ನ್ಯೋಲ್ ರಾಡ್ಫೋರ್ಡ್ ದಂಪತಿ ಕೇವಲ ತಮ್ಮ ಮಕ್ಕಳ ಹುಟ್ಟುಹಬ್ಬದ ಉಡುಗೊರೆಗೆಂದೇ ಈವರೆಗೆ ಬರೋಬ್ಬರಿ 70 ಲಕ್ಷ ರೂಪಾಯಿ ಖರ್ಚು ಮಾಡಿದೆ. ಈ ದಂಪತಿ 22ಕ್ಕೂ ಹೆಚ್ಚು ಮಕ್ಕಳನ್ನ ಹೊಂದಿದ್ದಾರೆ.
ಮನೆ ತುಂಬಾ ಮಕ್ಕಳನ್ನ ಹೊಂದಿರುವ ಈ ಕುಟುಂಬವು ಸದಾ ಗಿಜಿಗುಡುತ್ತಲೇ ಇರುತ್ತದೆ. ಈ ದಂಪತಿಯು ಬೇಕರಿಯನ್ನು ನಡೆಸಿಕೊಂಡು ಜೀವನ ಸಾಗಿಸುತ್ತಿದೆ. ಸ್ಯೂ ತನ್ನ ಜೀವನದ 800 ವಾರಗಳನ್ನ ಗರ್ಭಿಣಿಯಾಗಿ ಕಳೆದಿದ್ದಾಳೆ.
ಕ್ರಿಸ್, ಸೋಫಿ, ಚ್ಲೋ, ಜಾಕ್, ಡೇನಿಯಲ್, ಲ್ಯೂಕ್, ಮಿಲ್ಲೆ, ಕೇಟಿ, ಕೇಮ್ಸ್, ಎಲ್ಲೆ, ಏಮಿ, ಜೋಶ್, ಮ್ಯಾಕ್ಸ್, ಆಸ್ಕರ್, ಕಾಸ್ಪರ್, ಹ್ಯಾಲೆ, ಫೋಬೆ ಹಾಗೂ ಆರ್ಕೆ ಇವರ ಮಕ್ಕಳ ಹೆಸರಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಸ್ಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಮನೆಯ ಹೊಸ ಸದಸ್ಯೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುನ್ನ ಈ ಕುಟುಂಬದ ಬಗ್ಗೆ ಹೆಚ್ಚೇನು ಮಾಹಿತಿ ತಿಳಿದಿರಲಿಲ್ಲ. ಆದರೆ ಈಗ ಈ ಫ್ಯಾಮಿಲಿಯ ಬಗ್ಗೆ ಒಂದು ಕಾರ್ಯಕ್ರಮವೇ ಪ್ರದರ್ಶಿತವಾಗಿದೆ.
ಚಾನೆಲ್ 5ನ ಹೊಸ ಶೋ ಒಂದರಲ್ಲಿ ರಾಡ್ಫೋರ್ಡ್ಸ್ ತಮ್ಮ ದೈನಂದಿನ ಖರ್ಚನ್ನ ಹೇಗೆ ನಿಭಾಯಿಸ್ತಾರೆ ಹಾಗೂ ಲಾಕ್ಡೌನ್ ಸಂದರ್ಭದಲ್ಲಿ ಈ ಕುಟುಂಬ ಜೀವನ ನಿರ್ವಹಣೆಗೆ ಎಷ್ಟು ಕಷ್ಟಪಟ್ಟಿದೆ ಅನ್ನೋದರ ಬಗ್ಗೆ ವಿವರಣೆ ನೀಡಿದೆ.
22 ಮಕ್ಕಳಿಗೆ ಹೊಟ್ಟೆ ತುಂಬಿಸೋದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ. ಈ ಕುಟುಂಬವು ದಿನಕ್ಕೆ 7.5 ಲೀಟರ್ ಹಾಲನ್ನು ಬಳಕೆ ಮಾಡುತ್ತದೆ. ಇವರ ಮನೆಯಲ್ಲಿ ದಿನಕ್ಕೆ 34 ಟಾಯ್ಲೆಟ್ ಪೇಪರ್ಗಳು ಖಾಲಿಯಾಗುತ್ತವೆ.
ನಮ್ಮ ಮನೆಯಲ್ಲಿ ವರ್ಷಪೂರ್ತಿ ಬರ್ತಡೇ ಆಚರಣೆ ನಡೆಯುತ್ತಲೇ ಇರುತ್ತೆ. ಆದರೆ ನಾವೆಂದೂ ಮಕ್ಕಳ ದಿನವನ್ನು ವಿಶೇಷವಾಗಿಯೇ ಆಚರಿಸಿದ್ದೇವೆ ಎಂದು ಸ್ಯೂ ಹೇಳಿದ್ದಾರೆ.