ಭಾರತಕ್ಕೆ ಭೇಟಿ ನೀಡುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

Prasthutha|

- Advertisement -

ನವದೆಹಲಿ: ವಿಶ್ವ ಆರೋಗ್ಯ ಇಲಾಖೆಯಿಂದ ಅನುಮೋದನೆಗೊಂಡ ಲಸಿಕೆಯನ್ನು ಪಡೆದ ಪ್ರವಾಸಿಗರು ಕಡ್ಡಾಯ ಕೋವಿಡ್ ನೆಗೆಟಿವ್ ವರದಿಯೊಂದಿಗೆ ಭಾರತಕ್ಕೆ ಪ್ರಯಾಣ ಬೆಳೆಸಬಹುದು ಎಂದು ಭಾರತ ಸ್ಪಷ್ಟಪಡಿಸಿದೆ.

ಮಾತ್ರವಲ್ಲ ಅಕ್ಟೋಬರ್ 25 ರಿಂದ ಈ ನೂತನ ನಿಯಮ ಜಾರಿಗೆ ಬರಲಿದ್ದು, ಕ್ವಾರಂಟೈನ್ ಮತ್ತು ಕೋವಿಡ್ ಪರೀಕ್ಷೆಗೊಳಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ. ಈ ವೇಳೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಲಿದೆ.

- Advertisement -

ಈ ಮಧ್ಯೆ ಭಾಗಶಃ ಲಸಿಕೆ ಹಾಕದಿದ್ದಲ್ಲಿ ಪ್ರಯಾಣಿಕರು ಆಗಮನದ ನಂತರ ಕೋವಿಡ್ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಬೇಕಾಗಿದೆ. ಮಾತ್ರವಲ್ಲ ಆಗಮನದ ಏಳು ದಿನಗಳ ಕಾಲ ಗೃಹ ಕ್ವಾರಂಟೈನ್, ಮರು ಪರೀಕ್ಷೆ ಕಡ್ಡಾಯವಾಗಲಿದೆ. ಎಂಟನೆ ದಿನಕ್ಕೆ ನೆಗೆಟಿವ್ ವರದಿ ಬಂದ ನಂತರ ಮುಂದಿನ 7 ದಿನಗಳ ಕಾಲ ಆರೋಗ್ಯದ ಮೇಲ್ವಿಚಾರಣೆ ನಡೆಸಬೇಕಾಗಿದೆ.

ಭಾರತ ಸರ್ಕಾರ ನೂತನ ಕೋವಿಡ್ ಮಾರ್ಗಸೂಚಿಯು ಫೆಬ್ರವರಿ 17, 2021 ರಂದು ಜಾರಿಗೊಳಿಸಿದ ಮಾರ್ಗಸೂಚಿಗಳ ಪರಿಷ್ಕರಣೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರಸಕ್ತ ಭಾರತ ವಿಶ್ವ ಆರೋಗ್ಯ ಇಲಾಖೆಯಿಂದ ಅನುಮೋದನೆಗೊಂಡ ಲಸಿಕೆ ಪಡೆದ 11 ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್, ಜರ್ಮನಿ, ನೇಪಾಳ, ಬೆಲಾರಸ್, ಲೆಬನಾನ್, ಅರ್ಮೇನಿಯಾ, ಉಕ್ರೇನ್, ಬೆಲ್ಜಿಯಂ, ಹಂಗೇರಿ ಮತ್ತು ಸರ್ಭಿಯಾ ದೊಂದಿಗೆ ಒಪ್ಪಂದ ನಡೆಸಿದೆ.

ಪ್ರಯಾಣಿಕರು ವರದಿಯ ಸತ್ಯಾಸತ್ಯತೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ಇದರಲ್ಲಿ ವಂಚನೆ ಕಂಡುಬಂದಲ್ಲಿ ಕ್ರಿಮಿನಲ್ ಪ್ರಕರಣಕ್ಕೆ ಒಳಗಾಗುವ ಸಾಧ್ಯತೆಯಿದೆ.



Join Whatsapp