ಭಾರತದ ಪ್ರಮುಖ ಕಾಲೇಜು ಪ್ರವೇಶ ಪರೀಕ್ಷೆಯಾದ ಜಂಟಿ ಪ್ರವೇಶ ಪರೀಕ್ಷೆಯ(ಜೆಇಇ) ತಯಾರಿಗಾಗಿ ವಿಧ್ಯಾರ್ಥಿಗಳಿಗೆ ತರಬೇತಿ ನೀಡಲು ಅಮೆಜಾನ್ ಹೊಸ ವರ್ಚುವಲ್ ಲರ್ನಿಂಗ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಅದು ‘ಅಮೆಜಾನ್ ಅಕಾಡೆಮಿ’ ಎಂಬ ಹೆಸರಿನಲ್ಲಿ ಅಪ್ಲಿಕೇಶನ್ ಮತ್ತು ವೆಬ್ ಸೈಟ್ ರೂಪದಲ್ಲಿ ಬಿಡುಗಡೆಯಾಗಲಿದೆ. ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ) ತಯಾರಿಗಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಮೆಜಾನ್ ಅಕಾಡೆಮಿಯು ಅಧ್ಯಯನ ಸಾಮಗ್ರಿಗಳು, ಲೈವ್ ಉಪನ್ಯಾಸಗಳು ಮತ್ತು ಮೌಲ್ಯಮಾಪನಗಳನ್ನು ಒದಗಿಸುತ್ತದೆ. ಅಮೆಜಾನ್ ಅಕಾಡೆಮಿಯು ವಿಷಯಗಳನ್ನು ಕೆಲವು ತಿಂಗಳವರೆಗೆ ಉಚಿತವಾಗಿ ನೀಡಲಿದೆ ಎಂದು ಅಮೆಜಾನ್ ಘೋಷಿಸಿದೆ.
ಜೆಇಇ ಪರೀಕ್ಷೆಗೆ ಪ್ರತಿ ವರ್ಷ ಸುಮಾರು 20 ಲಕ್ಷ ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಈ ಪರೀಕ್ಷೆಗಾಗಿ ಅನೇಕ ವಿದ್ಯಾರ್ಥಿಗಳು ಖಾಸಗಿ ವ್ಯಕ್ತಿಗಳ ಬಳಿ ಮತ್ತು ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿದ್ದರು. ಕೋವಿಡ್‌ನ ಸನ್ನಿವೇಶದಲ್ಲಿ ಅಂತಹ ಬೋಧನಾ ಕೇಂದ್ರಗಳು ಆನ್‌ಲೈನ್ ಮೂಲಕ ನಡೆಯುತ್ತಿತ್ತು. ಕೆಲವು ಸಂಸ್ಥೆಗಳು ಮುಚ್ಚಲ್ಪಟ್ಟಿದ್ದವು.
ಕೋವಿಡ್ ಅವಧಿಯಲ್ಲಿ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಗಿದ್ದರಿಂದ ಆನ್‌ಲೈನ್ ಶಿಕ್ಷಣವು ಭಾರಿ ಬೆಳವಣಿಗೆಯನ್ನು ಕಂಡಿತ್ತು. ಆನ್‌ಲೈನ್ ವರ್ಚುವಲ್ ಶಿಕ್ಷಣದಲ್ಲಿ ದೊಡ್ಡ ಕ್ರಾಂತಿಯನ್ನುಂಟು ಮಾಡಿದ್ದ ಬೈಜೂಸ್ ಅಪ್ಲಿಕೇಶನ್‌ಗೆ ಸವಾಲಾಗಿ ಅಮೆಜಾನ್ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ.