ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ ‘ಅಲ್ಪಸಂಖ್ಯಾತರು’ ಎಂಬ ಪದವನ್ನು ಕೂಡ ಬಳಸಿಲ್ಲ: ಉವೈಸಿ

Prasthutha|

ಹೈದರಾಬಾದ್: ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ ‘ಅಲ್ಪಸಂಖ್ಯಾತರು’ ಎಂಬ ಪದವನ್ನು ಕೂಡ ಬಳಸಿಲ್ಲ. ಅಷ್ಟರಮಟ್ಟಿಗೆ ಅದು ಅಲ್ಪಸಂಖ್ಯಾತರನ್ನು ದ್ವೇಷಿಸುತ್ತಿದೆ. ಎಂದು ಸಂಸದ ಅಸಾದುದ್ದೀನ್ ಉವೈಸಿ ಹೇಳಿದ್ದಾರೆ.

- Advertisement -

ಬಿಜೆಪಿಯ ವಿವಿಧ ಪತ್ರಿಕೆಗಳಲ್ಲಿ ಬಿಜೆಪಿಯ ಜಾಹೀರಾತನ್ನು ನೋಡಿದ್ದೇನೆ. ಅವರು ಸರ್ಕಾರದಿಂದ ಸಾಲ ಅಥವಾ ಉದ್ಯಮ ಪ್ರಾರಂಭಿಸಲು ಸಹಾಯ ಮಾಡುವ ಬಗ್ಗೆ ಮಾತನಾಡುವಾಗ ದಯವಿಟ್ಟು ನೋಡಿ, ಅದರಲ್ಲಿ ಎಸ್‌ಟಿ ಮತ್ತು ಒಬಿಸಿ ಎಂದು ಹೇಳಲಾಗಿದೆ. ಮುಸ್ಲಿಮರ ಹೆಸರು ಬಿಡಿ ಕನಿಷ್ಠ ಅಲ್ಪಸಂಖ್ಯಾತರು ಎಂಬ ಪದವನ್ನು ಕೂಡ ಉಲ್ಲೇಖಿಸಲು ಬಿಜೆಪಿ ನಿರಾಕರಿಸಿದೆ. ಅಲ್ಪಸಂಖ್ಯಾತರು ಎಂಬ ಪದವನ್ನು ಭಾರತದ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ ಮತ್ತು ಬಿಜೆಪಿಯು ‘ಎಂ’ ಪದದ ಬಗ್ಗೆ ಅಪಾರ ದ್ವೇಷವನ್ನು ಹೊಂದಿದೆ ಎಂದು ಉವೈಸಿ ಹೇಳಿದ್ದಾರೆ

ಉತ್ತರಪ್ರದೇಶದಲ್ಲಿ ಅನುಪ್ರಿಯಾ ಪಟೇಲ್ ಅವರ ಅಪ್ನಾ ದಳದ ಜೊತೆಗಿನ ಎಐಎಂಐಎಂ ಮೈತ್ರಿ ವಿಧಾನಸಭೆ ಚುನಾವಣೆಯಲ್ಲಿಯೂ ಮುಂದುವರಿಯುತ್ತದೆ ಮತ್ತು ಮಹಾರಾಷ್ಟ್ರದ ಅಕೋಲಾದಲ್ಲಿ ಪ್ರಕಾಶ್ ಅಂಬೇಡ್ಕರ್ ಮತ್ತು ಅಮರಾವತಿಯಲ್ಲಿ ಆನಂದ್ ಅಂಬೇಡ್ಕರ್ ಅವರನ್ನು ಪಕ್ಷ ಬೆಂಬಲಿಸುತ್ತದೆ ಎಂದು ಇದೇ ಸಂದರ್ಭ ಹೇಳಿದ್ದಾರೆ.

- Advertisement -

.

Join Whatsapp