ಬಿಜೆಪಿ ಕೊರೋನಾಗಿಂತ ದೊಡ್ಡ ಸಾಂಕ್ರಾಮಿಕ : ಟಿಎಂಸಿ ಸಂಸದೆ

Prasthutha|

- Advertisement -

ಬಿಜೆಪಿಯು ಕರೋನಾ ವೈರಸ್‌ಗಿಂತ ದೊಡ್ಡ ಸಾಂಕ್ರಾಮಿಕ ಎಂದು ತೃಣಮೂಲ ಸಂಸದೆ, ನಟಿ ನುಸ್ರತ್ ಜಹಾನ್ ಹೇಳಿದ್ದಾರೆ. ಹಿಂದೂ ಮತ್ತು ಮುಸ್ಲಿಮರ ನಡುವೆ ಗಲಭೆ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ದಗಂಗಾದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದ್ದಾರೆ.

“ಬಿಜೆಪಿ ಕರೋನಾ ವೈರಸ್ ಗಿಂತ ದೊಡ್ಡ ಸಾಂಕ್ರಾಮಿಕವಾಗಿದೆ. ಅವರಿಗೆ ಬಂಗಾಳದ ಸಂಸ್ಕೃತಿ ಬಗ್ಗೆ ಏನೂ ಗೊತ್ತಿಲ್ಲ. ದೇಶದ ಹಿಂದೂ ಮತ್ತು ಮುಸ್ಲಿಮರ ನಡುವೆ ಗಲಭೆ ಸೃಷ್ಟಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಅವರು ಧರ್ಮದ ಆಧಾರದ ಮೇಲೆ ಜನರನ್ನು ಬೇರ್ಪಡಿಸಿ ಗಲಭೆ ನಡೆಸಲು ಪ್ರಚೋದಿಸುತ್ತಿದ್ದಾರೆ ”ಎಂದು ನುಸ್ರತ್ ಹೇಳಿದ್ದಾರೆ.

- Advertisement -

ಆದರೆ ಬಿಜೆಪಿಯ ಐಟಿ ಉಸ್ತುವಾರಿ ಅಮಿತ್ ಮಾಳವಿಯಾ ನುಸ್ರತ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ವ್ಯಾಕ್ಸಿನ್ ವಿರುದ್ಧ ಅತ್ಯಂತ ಕೆಟ್ಟ ರಾಜಕೀಯ ಮಾಡುತ್ತಿರುವುದನ್ನು ಬಂಗಾಳದಲ್ಲಿ ನಮಗೆ ಕಾಣಬಹುದು ಎಂಬುದು ಮಾಳವಿಯಾ ಅವರ ಪ್ರತಿಕ್ರಿಯೆಯಾಗಿತ್ತು. ಕೊರೋನಾ ಲಸಿಕೆ ವಿತರಿಸಲು ಬಂದ ವಾಹನವನ್ನು ತಡೆದು ಪ್ರತಿಭಟನೆ ನಡೆಸಿರುವುದು ಮಮತಾ ಸರಕಾರದ ಕ್ಯಾಬಿನೆಟ್ ಸಚಿವರಾಗಿದ್ದರು. ಆದರೆ ಈಗ ತೃಣಮೂಲ ಕಾಂಗ್ರೆಸ್ ಸಂಸದರೊಬ್ಬರು ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ಬಿಜೆಪಿಯನ್ನು ಕೊರೋನಾಗೆ ಹೋಲಿಸುತ್ತಿದ್ದಾರೆ ಎಂದು ಅವರು ಟ್ಟೀಟ್ ಮಾಡಿದ್ದಾರೆ.



Join Whatsapp