1992ರ ಡಿಸೆಂಬರ್ 6ರಂದು ಕರಸೇವಕರ ಗುಂಪು ಬಾಬ್ರಿ ಮಸ್ಜಿದ್ ಧ್ವಂಸಗಯ್ಯುವಾಗ ನರಸಿಂಹರಾವ್ ಗೃಹ ಕಾರ್ಯದರ್ಶಿಯಾಗಿದ್ದ ಮಾಧವ ಗೋಡ್ಬಲೆ, ಬಲಪಂಥೀಯ ನಾಯಕರನ್ನು ದೋಷಮುಕ್ತಗೊಳಿಸಿದ ಸಿ.ಬಿ.ಐ ನ್ಯಾಯಾಲಯದ ತೀರ್ಪಿನಿಂದ ಆಘಾತಗೊಂಡಿರುವುದಾಗಿ ತಿಳಿಸಿದ್ದಾರೆ.
“ಇದು ನನಗೆ ದೊಡ್ಡ ಅಚ್ಚರಿಯನ್ನುಂಟುಮಾಡಿದೆ” ಎಂದು ಗೋಡ್ಬಲೆ ನ್ಯೂಸ್ 18 ಗೆ ನೀಡಿದ ಸಂದರ್ಶನಲ್ಲಿ ತಿಳಿಸಿದ್ದಾರೆ.
ತನ್ನ ನಿವೃತ್ತಿಯ ಬಳಿಕ ಪುಸ್ತಕವೊಂದನ್ನು ಬರೆದ ಗೋಡ್ಬಲೆ, 1992ರ ಡಿ.6ರ ಘಟನೆಯನ್ನು ತಪ್ಪಿಸುವುದಕ್ಕಾಗಿ ಕೇಂದ್ರ ಗೃಹ ಕಾರ್ಯದರ್ಶಿ ಕಚೇರಿಯು ಪೂರ್ವ ಯೋಜನೆಯೊಂದನ್ನು ಕಳುಹಿಸಿತ್ತು ಎಂದು ಉಲ್ಲೇಖಿಸಿದ್ದರು. ಅನುಬಂಧ 356 ಅನ್ನು ಜಾರಿಗೊಳಿಸಿ ಕಟ್ಟಡವನ್ನು ಸರಕಾರದ ವಶಕ್ಕೆ ಪಡೆಯುವಂತೆ ಗೃಹ ಸಚಿವಾಲಯವು ಪ್ರಧಾನಿ ಪಿ.ವಿ.ನರಸಿಂಹರಾವ್ ರಿಗೆ ಶಿಫಾರಸ್ಸು ಮಾಡಿತ್ತು. ಆದರೆ ಮಾಜಿ ಪ್ರಧಾನಿಗಳು ಅದನ್ನು ತಿರಸ್ಕರಿಸಿದ್ದರು ಎಂದು ಅವರು ಬರೆದಿದ್ದರು.
ನ್ಯೂಸ್ 18ಗೆ ಗೋಡ್ಬಲೆ ನೀಡಿದ ಸಂದರ್ಶನದ ಭಾಗ ಇಲ್ಲಿದೆ.
ತೀರ್ಪಿನ ಕುರಿತು ನಿಮ್ಮ ಅಭಿಪ್ರಾಯವೇನು?
ಸ್ವಯಂಪ್ರೇರಿತವಾಗಿ ಇಷ್ಟು ದೊಡ್ಡ ಗಾತ್ರದ ಗುಂಪು ಒಟ್ಟು ಸೇರಬಹುದೆಂದು ನಂಬುವುದು ಅಸಾಧ್ಯವಾಗಿದೆ. 28 ವರ್ಷಗಳ ಬಳಿಕ ಈ ತೀರ್ಪು ಪ್ರಕಟಿಸುವುದಾದರೆ ನಮ್ಮ ಅಪರಾಧಿ ನ್ಯಾಯ ವ್ಯವಸ್ಥೆಯ ಮೇಲೆ ಇದೊಂದು ವ್ಯಾಖ್ಯೆಯಾಗಿದೆ. ಕಟ್ಟಡವನ್ನು ಧ್ವಂಸಗೊಳಿಸಿರುವುದು ಅಪರಾಧಿ ಕೃತ್ಯ ಎಂಬುದಾಗಿ ಸ್ವತ: ಸುಪ್ರೀಂ ಕೋರ್ಟ್ ಘೋಷಿಸಿತ್ತು. ಸಂಚಿನ ಕುರಿತು ನ್ಯಾಯಾಲಯವು ಪುರಾವೆಯನ್ನು ಶೋಧಿಸಿಲ್ಲವೆಂಬುದನ್ನು ನಂಬಲು ಸಾಧ್ಯವಿಲ್ಲ.
356ನೆ ವಿಧಿಯನ್ನು ಜಾರಿಗೊಳಿಸಿ ಕಟ್ಟಡವನ್ನು ವಶಪಡಿಸಿಕೊಳ್ಳಬೇಕೆಂದು ನೀವು ಬರೆದಿದ್ದಿರಿ. ನಿಮ್ಮ ಯೋಜನೆಯನ್ನು ನೀವು ಕ್ಯಾಬಿನೆಟ್ ಕಾರ್ಯದರ್ಶಿ, ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮಂತ್ರಿಯವರ ಹಿರಿಯ ಸಲಹೆಗಾರ, ಗೃಹ ಸಚಿವರು ಮತ್ತು ಪ್ರಧಾನ ಮಂತ್ರಿಗಳ ಬಳಿ ಘಟನೆ ನಡೆಯುವ 2 ದಿನ ಮುಂಚೆ ಡಿಸೆಂಬರ್ 4ರಂದು ತೆಗೆದುಕೊಂಡು ಹೋಗಿದ್ದರೂ ಪರಿಣಾಮವಾಗಲಿಲ್ಲ ಎಂದು ನೀವು ಬರೆದಿದ್ದೀರಿ. ಯಾಕಾಗಿ ಹಾಗಾಯಿತು ಎಂದು ನೀವು ಭಾವಿಸುತ್ತೀರಿ?
(ನಗುತ್ತಾರೆ) ಅದುವೇ ನಡೆದಿರುವುದು. ಏನೂ ಆಗಲಿಲ್ಲ. ನರಸಿಂಹರಾವ್ ರವರು ವಿಷಯದ ಮೇಲೆ ನಿರ್ಣಯ ತೆಗೆದುಕೊಳ್ಳಲು ಸಿದ್ಧರಾಗಿದ್ದರೆಂದು ನಾನು ಭಾವಿಸುತ್ತೇನೆ. 356ನೆ ವಿಧಿಯನ್ನು ಜಾರಿಗೊಳಿಸುವುದು ರಾಜಕೀಯವಾಗಿ ಸ್ವೀಕಾರಾರ್ಹವೆಂದು ಅವರು ಪರಿಗಣಿಸಿಲ್ಲವೆಂದು ತೋಚುತ್ತದೆ. ಅದರಾಚೆಗೆ ನಾನೇನೂ ಹೇಳಲು ಸಾಧ್ಯವಿಲ್ಲ. ಹಸ್ತಕ್ಷೇಪಗಳು ನಡೆದಿರಬಹುದು.
ಕಟ್ಟಡ ಉರುಳಿದ ಕೆಲವೇ ದಿನಗಳಲ್ಲಿ ನೀವು ಅಯೋಧ್ಯೆಗೆ ಭೇಟಿ ನೀಡಿದ್ದಿರಿ. ಈ ಭೇಟಿಯ ಕುರಿತು ನಿಮ್ಮ ಅಭಿಪ್ರಾಯವೇನು?
ಸಂಚು ನಡೆದಿಲ್ಲ ಎಂದು ನಂಬಲು ಸಾಧ್ಯವಿಲ್ಲ. ಸ್ಪಷ್ಟವಾಗಿ ಕೋರ್ಟು 500 ಸಾಕ್ಷಿಗಳನ್ನು ಪರಿಶೀಲಿಸಿತ್ತು. ಆದರೆ ಸಂಚು ನಡೆದಿರುವುದನ್ನುಶೋಧಿಸಿಲ್ಲ. ಇದುವೇ ನನಗೆ ದೊಡ್ಡ ಅಚ್ಚರಿ.