ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಕರಾಳ ದಿನ: ಉವೈಸಿ

Prasthutha|

ಹೊಸದಿಲ್ಲಿ: ಬಾಬ್ರಿ ಮಸ್ಜಿದ್ ಧ್ವಂಸ ಪ್ರಕರಣದ ಕುರಿತಂತೆ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪನ್ನು ಎ.ಐ.ಎಂ.ಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಉವೈಸಿ ‘ಕರಾಳ ದಿನ’ ಎಂದು ಬಣ್ಣಿಸಿದ್ದಾರೆ.

- Advertisement -

“ಇಂದು ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಅತ್ಯಂತ ದು:ಖದ ದಿನವಾಗಿದೆ. ಇದು ಕರಾಳ ದಿನವಾಗಿದೆ. ಏಕೆಂದರೆ ಈಗಾಗಲೇ ಒಡೆತನ ಹಕ್ಕಿನ ತೀರ್ಪಿನ ವೇಳೆ ಸುಪ್ರೀಂ ಕೋರ್ಟ್,  ಬಾಬ್ರಿ ಧ್ವಂಸವನ್ನು ಕಾನೂನಿನ ಸಂಪೂರ್ಣ ಉಲ್ಲಂಘನೆ ಮತ್ತು ಆರಾಧನಾ ಸ್ಥಳವನ್ನು ಧ್ವಂಸಗೈದ ಲೆಕ್ಕಾಚಾರದ ಕೃತ್ಯವಾಗಿದೆ ಎಂದು ಹೇಳಿತ್ತು” ಎಂದು ಅವರು ನೆನಪಿಸಿದರು.

ಎ.ಐ.ಎಂ.ಐ.ಎಂ ಈ ತೀರ್ಪಿನ ಕುರಿತು ಅತೃಪ್ತವಾಗಿದೆ ಮತ್ತು ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಲಿದೆ ಎಂದು ಅವರು ಹೇಳಿದರು.

Join Whatsapp