ನಿವೃತ್ತಿ ಘೋಷಿಸಿದ ಖಬೀಬ್

Prasthutha|

- Advertisement -

ಅಬೂಧಾಬಿ: ಅಜೇಯ ಲೈಟ್ ವೈಟ್ ಚಾಂಪಿಯನ್ ಖಬೀಬ್ ನುರ್ಮಗೊಮೆದೊವ್ ಮಿಶ್ರ ಮಾರ್ಶಿಯಲ್ ಆರ್ಟ್ಸ್ ನಿಂದ ನಿವೃತ್ತರಾಗಿದ್ದಾರೆ. ಶನಿವಾರ ರಾತ್ರಿ ಯು.ಎಫ಼್.ಸಿ 254 ರ ದ್ವಿತೀಯ ಸುತ್ತಿನಲ್ಲಿ ಜಸ್ಟಿನ್ ಗೇತ್ ಜೆ ರನ್ನು ಟ್ರಯಾಂಗಲ್ ಚೋಕ್ ನೊಂದಿಗೆ ತಡೆದು ನಿಲ್ಲಿಸಿ ಗೆಲುವಿನ ಪತಾಕೆಯನ್ನು ಹಾರಿಸಿದ ಬಳಿಕ ತನ್ನ ಈ ನಿರ್ಧಾರವನ್ನು ಘೋಷಿಸಿದ್ದಾರೆ.

- Advertisement -

ಜುಲೈ ತಿಂಗಳಲ್ಲಿ ತನ್ನ ತಂದೆ ಹಾಗೂ ಜೀವನ ಪರ್ಯಂತ ಕೋಚ್ ನ ಮರಣದ ಬಳಿಕದ ಮೊದಲ ಕಾಳಗವನ್ನು ಖಬೀಬ್ (29-0) ಪ್ರಭಾವಶಾಲಿಯಾಗಿ ಕೊನೆಗೊಳಿಸಿದರು. ಕೋವಿಡ್ 19 ನಿಂದಾಗಿ ಅಬ್ದುಲ್ ಮನಾಪ್ ನುರ್ಮಗೊಮೆದೊವ್ ರ ಹೃದಯ ಸಂಬಂಧಿ ಕಾಯಿಲೆ ಉಲ್ಬಣಗೊಂಡಿತ್ತು. ತನ್ನ ಮೂರನೆ ಯು.ಎಫ಼್.ಸಿ ಪ್ರಶಸ್ತಿ ಉಳಿಸುವ ಕಾದಾಟದ ಎರಡನೆ ಸುತ್ತಿನಲ್ಲಿ ಗೇತ್ ಜೆ ರನ್ನು 1:34 ಅಂಕಗಳೊಂದಿಗೆ ಪ್ರಜ್ನಾರಹಿತರನ್ನಾಗಿ ಮಾಡಿದ ಖಬೀಬ್ ಕಣ್ಣೀರಿನೊಂದಿಗೆ ವಿದಾಯ ಘೋಷಿಸಿದರು‌.

“ಇದು ನನ್ನ ಕೊನೆಯ ಕಾದಾಟ. ನನ್ನ ತಂದೆಯಿಲ್ಲದೆ ಮರಳಲು ಸಾಧ್ಯವಿಲ್ಲ. ನಾನು ನನ್ನ ತಾಯಿಯ ಜೊತೆ ಮಾತನಾಡಿದೆ. ನನ್ನ ತಂದೆಯ ಹೊರತಾಗಿ ನಾನು ಹೇಗೆ ಕಾದಾಡುವುದೆಂದೇ ಅವರಿಗೆ ತಿಳಿದಿಲ್ಲ. ಇದು ನನ್ನ ಕೊನೆಯ ಕಾದಾಟವಾಗಲಿದೆ ಎಂದು ನಾನು ಭರವಸೆ ನೀಡಿದ್ದೇನೆ. ನನ್ನ ಮಾತುಗಳನ್ನು ಉಳಿಸಬೇಕಾದರೆ ನಾನಾದನ್ನು ಪಾಲಿಸಬೇಕು” ಎಂದು ಖಬೀಬ್ ಪಂದ್ಯದ ಬಳಿಕ ಹೇಳಿದರು.

ಗೇತ್ ಜೆ ವಿರುದ್ಧದ ಪಂದ್ಯದಲ್ಲಿ ಹೊಡೆತ ಮತ್ತು ಹಿಡಿತಗಳೊಂದಿಗೆ 32ರ ಹರೆಯದ ನುರ್ಮಗುಮೆದೋವ್ ಕ್ರಿಯಾಶೀಲರಾಗಿದ್ದರು. ಯು.ಎಫ್.ಸಿಯ ಮಧ್ಯಂತರ ಪ್ರಶಸ್ತಿಯ‌ನ್ನು ಮುಡಿಗೇರಿಸಿಕೊಳ್ಳಲು ಅವರು ಸತತ ನಾಲ್ವರು ಎಲೈಟ್ ಎದುರಾಳಿಗಳನ್ನು ಹೊರಗಟ್ಟಿದ್ದರು.



Join Whatsapp