ಜ್ಯೂನಿಯರ್ ಫ್ರೆಂಡ್ಸ್ ಜೋಕಟ್ಟೆ ವತಿಯಿಂದ ಕ್ರೀಡಾಕೂಟ

Prasthutha|

ಜೋಕಟ್ಟೆ : ಜ್ಯೂನಿಯರ್ ಫ್ರೆಂಡ್ಸ್ ವತಿಯಿಂದ ಜೋಕಟ್ಟೆ ಶಾಲಾ ಮೈದಾನದಲ್ಲಿ ಮಕ್ಕಳಿಗೆ ಕ್ರೀಡಾಕೂಟ ನಡೆಯಿತು.
ಅಮೀನ್ ಜೋಕಟ್ಟೆ ಮತ್ತು ನೌಫಲ್ ಜೋಕಟ್ಟೆ ರವರ ನೇತೃತ್ವದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸುಮಾರು ನೂರಕ್ಕೂ ಅಧಿಕ ಮಕ್ಕಳು ಭಾಗವಹಿಸದ್ದರು. ಹಗ್ಗ ಜಗ್ಗಾಟ, ಬಾಸ್ಕೇಟ್ ಬಾಲ್,ಸೈಕಲ್ ಬ್ಯಾಲನ್ಸ್ ಹಾಗೂ ಇನ್ನಿತರ ಕ್ರೀಡೆಗಳನ್ನು ಆಯೋಜಿಸಲಾಯಿತು.
ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಫೀಕ್ ಜೋಕಟ್ಟೆ, ಝುಬೈರ್ ಜೋಕಟ್ಟೆ, ಜೂನಿಯರ್ ಫ್ರೆಂಡ್ಸ್ ಇಂಚಾರ್ಜ್ ತಂಝೆಲ್, ಕ್ಯಾಂಪಸ್ ಫ್ರಂಟ್ ಜೋಕಟ್ಟೆ ವಲಯಾಧ್ಯಕ್ಷ ಝಿಯಾದ್, ಮುಶೀರ್, ತೌಸೀಫ್, ಮುಸ್ತಫ ಮುಂತಾದವರು ಭಾಗವಹಿಸಿದ್ದರು.