ಬಹಿರಂಗ ಕ್ಷಮೆ ಕೇಳಿ ಟಿಎಂಸಿಗೆ ಮರಳುತ್ತಿರುವ ಬಿಜೆಪಿ ಕಾರ್ಯಕರ್ತರು

Prasthutha|

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಗೆ ಸೇರಿದ್ದ ನಾಯಕರು ಮತ್ತೆ ಟಿಎಂಸಿಗೆ ಮರಳುತ್ತಿರುವ ಪರ್ವ ಆರಂಭಗೊಳ್ಳುತ್ತಿದ್ದಂತೆ ಇತ್ತ ಕಾರ್ಯಕರ್ತರು ಕೂಡ ಬಿಜೆಪಿಗೆ ಸೇರಿ ತಪ್ಪು ಮಾಡಿದ್ದೇವೆ, ನಮ್ಮನ್ನು ಕ್ಷಮಿಸಿ ಎಂದು ಬಹಿರಂಗವಾಗಿ ಕ್ಷಮೆ ಕೇಳಿ ಟಿಎಂಸಿಗೆ ಮರಳುತ್ತಿದ್ದಾರೆ.

- Advertisement -


ಇ- ರಿಕ್ಷಾಗಳಲ್ಲಿ ಮೈಕ್ ಕಟ್ಟಿ ನಾವು ಬಿಜೆಪಿಯನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೆವು ಎಂದು ಬಿರ್ಮೂಮ್ ಜಿಲ್ಲೆಯ ಲಾಭ್ ಪುರ, ಬೋಲ್ ಪುರ, ಸೈಂಥಿಯಾ ಮತ್ತು ಹೂಗ್ಲಿ ಜಿಲ್ಲೆಯ ಧನಿಯಾಖಾಲಿ ಗ್ರಾಮದಲ್ಲಿ ಬಿಜೆಪಿ ಸೇರಿದ್ದವರು ಬಹಿರಂಗ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಟಿಎಂಸಿಗೆ ಮರಳಿದ ಒಂದು ದಿನದ ನಂತರ ಮತ್ತು ಮಾಜಿ ರಾಜ್ಯ ಸಚಿವ ರಾಜೀಬ್ ಬ್ಯಾನರ್ಜಿ ಅವರು ತೃಣಮೂಲ ವಕ್ತಾರ ಕುನಾಲ್ ಘೋಷ್ ಅವರೊಂದಿಗೆ ಶನಿವಾರ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಈ ಘಟನೆಗಳು ನಡೆಯುತ್ತಿವೆ.


ಸೈಂಥಿಯಾದಲ್ಲಿ, 300 ಮಂದಿಯ ಬಿಜೆಪಿ ಕಾರ್ಯಕರ್ತರ ಗುಂಪು ಪ್ರತಿಜ್ಞೆಗೈದು ಟಿಎಂಸಿಗೆ ಮರಳಿತು.
“ನಾವು ತಪ್ಪು ಗ್ರಹಿಕೆಯಿಂದ ಬಿಜೆಪಿಗೆ ಹೋಗಿದ್ದೆವು. ಮಮತಾ ಬ್ಯಾನರ್ಜಿಯ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಲು ನಾವು ಇಂದಿನಿಂದ ಟಿಎಂಸಿಗೆ ಸೇರುತ್ತಿದ್ದೇವೆ.” ಅವರಲ್ಲಿ ಬಿಜೆಪಿ ಮಾಜಿ ಯುವ ಮೋರ್ಚಾ ಮಂಡಲ್ ಅಧ್ಯಕ್ಷ ತಪಸ್ ಕೂಡ ಸೇರಿದ್ದಾರೆ.
“ನಾನು ಬಿಜೆಪಿಯಲ್ಲಿ ಏನೂ ಮಾಡಲು ಸಾಧ್ಯವಾಗಲಿಲ್ಲ. ಅಭಿವೃದ್ಧಿಯಲ್ಲಿ ಭಾಗವಹಿಸಲು ನಾನು ಟಿಎಂಸಿಗೆ ಸೇರುತ್ತೇನೆ, ”ಎಂದು ಅವರು ಘೋಷಿಸಿದರು.



Join Whatsapp