ಬೆಂಗಳೂರು: ರಾಜ್ಯಸರಕಾರ ಐವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಇತ್ತೀಚೆಗಷ್ಟೇ 9 ಜಿಲ್ಲಾಧಿಕಾರಿಗಳು ಸೇರಿದಂತೆ 41 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯಸರಕಾರ ಇಂದು ಮತ್ತೆ ಐವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿ
ಭಾಸ್ಕರರಾವ್ -ಎಡಿಜಿಪಿ ರೈಲ್ವೆ,
ಪ್ರಶಾಂತ್ ಕುಮಾರ್ ಠಾಕೂರ್ -ಎಡಿಜಿಪಿ ಲೋಕಾಯುಕ್ತ,
ಡಾ.ಎಸ್. ಮೂರ್ತಿ – ಎಡಿಜಿಪಿ ಮತ್ತು ಎಂಡಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ,
ಡಾ.ಕೆ. ರಾಮಚಂದ್ರರಾವ್ -ಎಡಿಜಿಪಿ ಬಿಎಂಟಿಎಫ್
ಅರುಣ್ ಚಕ್ರವರ್ತಿ -ಎಡಿಜಿಪಿ ಆಂತರಿಕ ಭದ್ರತಾ ವಿಭಾಗ.