ಮಂಗಳೂರು | ಪಾಪ್ಯುಲರ್ ಫ್ರಂಟ್ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಿರುವ ಪೊಲೀಸ್ ಇಲಾಖೆ!

Prasthutha|

- Advertisement -

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ತನ್ನ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಫೆಬ್ರವರಿ 17ರಂದು ಪ್ರತಿ ವರ್ಷವೂ ರಾಜ್ಯದ ವಿವಿಧ ಕಡೆಗಳ ರಾಜ ಬೀದಿಯಲ್ಲಿ ಯುನಿಟಿ ಮಾರ್ಚ್ ಮತ್ತು ಮೈದಾನದಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

ಆದರೆ ಪ್ರತಿ ವರ್ಷವೂ ಪೊಲೀಸ್ ಇಲಾಖೆ ಶಿಸ್ತುಬದ್ಧವಾದ ಈ ಕಾರ್ಯಕ್ರಮಕ್ಕೆ ವಿಳಂಬವಾಗಿ ಮತ್ತು ಕೊನೆ ಕ್ಷಣದಲ್ಲಿ ಅನುಮತಿ ನೀಡುವ ಪರಿಪಾಠವನ್ನು ಬೆಳೆಸಿಕೊಂಡಿದೆ. ಈ ಮೂಲಕ ಅದು ನಮ್ಮ ಸಂಘಟನೆಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ಅವಕಾಶ ಮಾಡಿಕೊಡುತ್ತಿಲ್ಲ ಎಂಬುದು ಬಹಳ ಸ್ಪಷ್ಟವಾಗಿದೆ. ಈ ವರ್ಷವು ಕೂಡ ಮಂಗಳೂರು ಪೊಲೀಸರು ಅನುಮತಿಗಾಗಿ ನಮ್ಮನ್ನು ನಿರಂತರವಾಗಿ ಸತಾಯಿಸುತ್ತಿದ್ದಾರೆ. ಒಂದೆಡೆ, ನಮ್ಮ ಸಂಘಟನಾ ಕಾರ್ಯಕ್ರಮಕ್ಕೆ ಅನುಮತಿ ನೀಡಲು ವಿಳಂಬ, ನಿರಾಕರಣೆಯಂತಹ ಬೆಳವಣಿಗೆಗಳು ನಡೆಯುತ್ತಿದ್ದು, ಮತ್ತೊಂದೆಡೆ ಇತರ ರಾಜಕೀಯ ಮತ್ತು ಸಂಘಪರಿವಾರದ ಕಾರ್ಯಕ್ರಮಗಳಿಗೆ ಯಾವುದೇ ಅಡಚಣೆಯಿಲ್ಲದೇ ಅವಕಾಶ ನೀಡಲಾಗುತ್ತಿದೆ. ಇದೀಗ ನಾಳೆ ನಡೆಯುತ್ತಿರುವ ಕಾರ್ಯಕ್ರಮಕ್ಕೂ ಬಹಳಷ್ಟು ಶರತ್ತುಗಳೊಂದಿಗೆ ಅನುಮತಿ ದೊರಕುವ ನಿರೀಕ್ಷೆ ಇದ್ದರೂ, ರಾಜಕೀಯ ಪ್ರಭಾವ ಬಳಸಿ ಇದನ್ನು ಕೂಡ ನಿರಾಕರಿಸುವ ಪ್ರಯತ್ನಗಳು ನಡೆಯುತ್ತಿವೆ.

- Advertisement -

ಕಳೆದ ವರ್ಷ ದೇರಳಕಟ್ಟೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲದೇ, ಯಶಸ್ವಿಯಾಗಿ ಯುನಿಟಿ ಮಾರ್ಚ್ ಮತ್ತು ಸಭಾ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಆದರೂ ಈ ಬಾರಿ ಉಳ್ಳಾಲದಲ್ಲಿ ನಡೆಸಲು ಉದ್ದೇಶಿಸಿದ್ದ ಯುನಿಟಿ ಮಾರ್ಚ್ ಅವಕಾಶ ನಿರಾಕರಿಸಲಾಗಿದೆ. ಮಾತ್ರವಲ್ಲ, ಸಭಾ ಕಾರ್ಯಕ್ರಮ ನಡೆಸಲೂ ಹಲವಾರು ಷರತ್ತುಗಳನ್ನು ವಿಧಿಸಲಾಗಿದೆ. ಈ ಮೂಲಕ ಪೊಲೀಸ್ ಇಲಾಖೆಯು ಪ್ರಜೆಗಳ ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಜನರನ್ನು ಸಂಘಟಿಸುವ ಹಕ್ಕನ್ನು ಕಸಿಯುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Join Whatsapp