ಪಾಕಿಸ್ತಾನಕ್ಕೆ ಸೇನೆಯ ರಹಸ್ಯ ಮಾಹಿತಿ ಸೋರಿಕೆ ಪ್ರಕರಣ: ರವಿ ಪ್ರಕಾಶ್‌ ಎಂಬ ವ್ಯಕ್ತಿಯ ಬಂಧನ

Prasthutha|

ಜೈಪುರ: ಭಾರತೀಯ ಸೇನೆಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವನನ್ನು ರಾಜಸ್ಥಾನದ ಗುಪ್ತಚರದ ದಳ ಬಂಧಿಸಿದೆ.

- Advertisement -

ಆರೋಪಿಯನ್ನು ರಾಜಸ್ಥಾನದ ಕರೌಲಿಯ ಸಪೋತ್ರ ನಿವಾಸಿ ರವಿ ಪ್ರಕಾಶ್ ಮೀನಾ ಎಂದು ಗುರುತಿಸಲಾಗಿದೆ.

ಆರೋಪಿಯು ಪಾಕ್ ಮಹಿಳಾ ಏಜೆಂಟ್ ನೊಂದಿಗೆ ವಾಟ್ಸ್ ಆಪ್ ಮತ್ತು ಫೇಸ್ ಬುಕ್ ಮೂಲಕ ಬಹಳ ದಿನಗಳಿಂದ ಸಂಪರ್ಕದಲ್ಲಿದ್ದು, ಸೇನೆಯ ಕುರಿತು ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದರು ಎನ್ನಲಾಗಿದೆ .

- Advertisement -

ಈ ಕುರಿತು ಮಾತನಾಡಿದ ರಾಜಸ್ಥಾನದ ಗುಪ್ತಚರ ಇಲಾಖೆಯ ಮಹಾನಿರ್ದೇಶಕ ಉಮೇಶ್ ಮಿಶ್ರಾ ʼರವಿ ಪ್ರಕಾಶ್‌ ಮೀನಾ ಎಂಬುವವರು ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನಿ ಗುಪ್ತಚರ ನಿರ್ವಾಹಕರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಗಮನಕ್ಕೆ ಬಂದಿದೆ ಎಂದಿದ್ದಾರೆ.

ʼಈತ ದೆಹಲಿಯ ಸೇನಾ ಭವನದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲಾಖೆಯು ಈತನ ಕಾರ್ಯ ಚಟುವಟಿಕೆಗಳ ಮೇಲೆ ನಿಗಾ ಇಟ್ಟಾಗ, ಹನಿಟ್ರ್ಯಾಪ್‌ನಲ್ಲಿ ಸಿಕ್ಕಿಹಾಕಿಕೊಂಡು ಹಣದ ಆಮಿಷಕ್ಕೆ ಒಳಗಾಗಿ ಸೇನೆಯ ಎಲ್ಲಾ ಮುಖ್ಯ ಮಾಹಿತಿಯನ್ನು ಪಾಕಿಸ್ತಾನದ ಮಹಿಳಾ ಏಜೆಂಟ್‌ನೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆʼ ಎಂದು ಅವರು ತಿಳಿಸಿದ್ದಾರೆ.

Join Whatsapp