ಪತಿಯ ಬಗ್ಗೆ ಪಾಕಿಸ್ತಾನಿ, ಭಯೋತ್ಪಾದಕ ಎಂದು ಟ್ರೋಲ್ | ಟ್ರೋಲಿಗರ ವಿರುದ್ಧ ಗರಂ ಆದ ಊರ್ಮಿಳಾ

Prasthutha|

ನವದೆಹಲಿ: ತಮ್ಮ ಪತಿಯನ್ನು ಪಾಕಿಸ್ತಾನಿ ಹಾಗೂ ಭಯೋತ್ಪಾದಕ ಎಂದು ಎಗ್ಗಿಲ್ಲದೆ ಟ್ರೋಲ್ ಮಾಡಿದವರ ವಿರುದ್ಧ ಗರಂ ಆದ ರಾಜಕಾರಣಿ ಹಾಗೂ ನಟಿ ಊರ್ಮಿಳಾ ಮಾತೋಂಡ್ಕರ್, ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ಎಂದು ಗುಡುಗಿದ್ದಾರೆ.

- Advertisement -

2016ರ ಮಾರ್ಚ್ ನಲ್ಲಿ ಊರ್ಮಿಳಾ, ಕಾಶ್ಮೀರ ಮೂಲದ ಮೋಹ್ಸಿನ್ ಖಾನ್ ರನ್ನು ಕೆಲವು ಜನರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಈ ಬಳಿಕ ಹಲವಾರು ಟ್ರೋಲಿಗರು ಇವರ ಬಗ್ಗೆ ಟ್ರೋಲ್ ಗಳನ್ನು ಮಾಡಿದ್ದರು ಎಂದು ವರದಿಯಾಗಿದೆ.

ಟ್ರೋಲಿಗರ ವಿರುದ್ಧ ಸಿಡಿದೆದ್ದ ನಟಿ, “ನನ್ನ ಪತಿ ಕೇವಲ ಮುಸ್ಲಿಂ ಅಲ್ಲ ಬದಲಾಗಿ ಕಾಶ್ಮೀರಿ ಮುಸ್ಲಿಂ. ನಾವಿಬ್ಬರೂ ನಮ್ಮ ಧರ್ಮವನ್ನು ಪಾಲಿಸುತ್ತೇವೆ. ಹಾಗಾಗಿ ಹಲವರು ನನ್ನ ಕುರಿತಾಗಿ ಟ್ರೋಲ್ ಮಾಡುತ್ತಿದ್ದಾರೆ . ಇದಲ್ಲದೆ ನನ್ನ ಪತಿ ಹಾಗೂ ಕುಟುಂಬವನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ . ಇದು ನಿಜಕ್ಕೂ ಸಹಿಸಲು ಅಸಾಧ್ಯವಾದದ್ದು” ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.



Join Whatsapp