ಅತ್ಯಾಧುನಿಕ ಶೈಲಿಯಲ್ಲಿ ಕಂಗೊಳಿಸಲಿರುವ ಅಯೋಧ್ಯೆ ಮಸೀದಿ

Prasthutha|

ಲಕ್ನೋ: ಅಯೋಧ್ಯೆಯ ದನ್ನೀಪುರದಲ್ಲಿ ನಿರ್ಮಾಣವಾಗಲಿರುವ ಮಸೀದಿಯ ನೀಲ ನಕ್ಷೆಯನ್ನು ಶನಿವಾರ ಬಿಡುಗಡೆ ಮಾಡಲಾಗಿದ್ದು, ಗಾಜಿನ ಗುಮ್ಮಟ ಹೊಂದಿರುವ ದುಂಡಾಕಾರದ ವಿಭಿನ್ನ ಹಾಗೂ ಆಕರ್ಷನೀಯ ಮಸೀದಿಯಾಗಿ ಕಂಗೊಳಿಸಲಿದೆ.

- Advertisement -

ಯೋಜನೆಯ ಮೊದಲ ಹಂತದಲ್ಲಿ ಭವ್ಯ ಮಸೀದಿ ಹಾಗೂ ವಿಶಾಲ ಆಸ್ಪತ್ರೆ ನಿರ್ಮಾಣವಾಗಲಿದ್ದು, ಎರಡನೇ ಹಂತದಲ್ಲಿ ಆಸ್ಪತ್ರೆಯನ್ನು ವಿಸ್ತರಿಸುವ ಯೋಜನೆ ರೂಪಿಸಲಾಗಿದೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ತಿಳಿಸಿದೆ.

ಮಸೀದಿ ನಿರ್ಮಾಣದ ಮೊದಲ ಹಂತದ ಕಾಮಗಾರಿಗೆ ಜನವರಿ 26ರಂದು ಚಾಲನೆ ನೀಡಲು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ನಿರ್ಧರಿಸಿದೆ.

- Advertisement -

ಲಕ್ನೋದ ವಾಸ್ತುಶಿಲ್ಪಿ ಪ್ರೊ.ಎಂ.ಎಸ್.ಅಕ್ತರ್(ಐಐಸಿಎಫ್ ಕಾರ್ಯದರ್ಶಿ) ವಿಶಾಲ ಮಸೀದಿಯನ್ನು ವಿನ್ಯಾಸಗೊಳಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಹಂಚಿಕೆಯಾದ 5 ಎಕರೆ ಭೂಮಿಯಲ್ಲಿ ನಿರ್ಮಾಣವಾಗಲಿರುವ ಅಯೋಧ್ಯೆ ಮಸೀದಿಗೆ ಯಾವುದೇ ಸಾಮ್ರಾಟ ಅಥವಾ ರಾಜನ ನಾಮಕರಣವನ್ನು ಮಾಡುವುದಿಲ್ಲ ಎಂದು ಟ್ರಸ್ಟ್ ತಿಳಿಸಿದೆ.

2000 ಮಂದಿಗೆ ನಮಾಝ್ ನಿರ್ವಹಿಸಲು ಅವಕಾಶವಾಗುವ ಈ ಅಯೋಧ್ಯೆ ಮಸೀದಿಯು ಬಾಬರಿ ಮಸೀದಿಗಿಂತ ನಾಲ್ಕು ಪಟ್ಟು ದೊಡ್ಡದಾಗಲಿದ್ದು, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಮಸೀದಿಗಿಂತ ಆರು ಪಟ್ಟು ದೊಡ್ಡದಾಗಿರುತ್ತದೆ.

Join Whatsapp