ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿ ಬರೆದ ಎಲ್ಲಾ ಪತ್ರಗಳನ್ನು ಪರಿಗಣಿಸಲಾಗಿದೆ – ಸಚಿವ ಬಿ ಸಿ ನಾಗೇಶ್

Prasthutha|

ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆಯ ವಿರುದ್ಧ ಹಲವು ವಿರೋಧಗಳು ವ್ಯಕ್ತವಾಗುತ್ತಿದ್ದು, ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ, ಸಾಹಿತಿಗಳು ಸೇರಿದಂತೆ ಹಲವರು ಈ ಕುರಿತು ಸಿ ಎಂ ಬೊಮ್ಮಾಯಿಗೆ ಪತ್ರ ಬರೆದಿದ್ದರು.

- Advertisement -

ದೇವೇಗೌಡರಂತಹ ಗಣ್ಯರು ಮತ್ತು ಇತರರು ಮುಖ್ಯಮಂತ್ರಿ ಬೊಮ್ಮಾಯಿಗೆ ಬರೆದಿದ್ದ ಪತ್ರವನ್ನೆಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ಈ ವರೆಗೆ ಬಂದಿರುವ ಎಲ್ಲಾ ಪತ್ರಗಳ ಬಗ್ಗೆಯೂ ಚರ್ಚೆಯಾಗಿದೆ. ದೇವೇಗೌಡರ ಮತ್ತು ಇತರ ಎಲ್ಲಾ ಪತ್ರಗಳ ಪರಿಶೀಲನೆಯ ಕುರಿತು ನಾಳೆ ಸಂಪೂರ್ಣ ಮಾಹಿತಿಯನ್ನು ಸಿ ಎಂ ಬೊಮ್ಮಾಯಿಯವರೇ ನೀಡಲಿಕ್ಕಿದ್ದಾರೆ ಎಂದಿದ್ದಾರೆ.



Join Whatsapp