ಈದ್ಗಾ ಮೈದಾನ ವಿವಾದ: ಝಮೀರ್ ಮತ್ತು ಬಿಬಿಎಂಪಿ ಆಯುಕ್ತರು ಡೀಲ್ ಮಾಡಿದ್ದಾರೆ| ಸನಾತನ ಪರಿಷತ್ ಆರೋಪ

Prasthutha|

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿಚಾರವಾಗಿ ಶಾಸಕ ಜಮೀರ್ ಅಹಮದ್ ಮತ್ತು ಬಿಬಿಎಂಪಿ ಆಯುಕ್ತರು ತುಷಾರ್ ಗಿರಿನಾಥ್ ನಡುವೆ ಯಾವುದೋ ಡೀಲ್ ನಡೆದಿದೆ ಎಂದು ವಿಶ್ವ ಸನಾತನ ಪರಿಷತ್ತಿನ ಅಧ್ಯಕ್ಷ ಎಸ್.ಭಾಸ್ಕರನ್ ಆರೋಪಿಸಿದ್ದಾರೆ.

- Advertisement -

ಇಷ್ಟು ದಿನ ಈದ್ಗಾ ಮೈದಾನವನ್ನು ಬಿಬಿಎಂಪಿ ಆಸ್ತಿ ಎಂದು ಹೇಳುತ್ತಿದ್ದವರು ಈಗ ಏಕಾಏಕಿ ನಮ್ಮ ಆಸ್ತಿಯಲ್ಲ ಎನ್ನುತ್ತಿದ್ದಾರೆ. ವಕ್ಫ್ ಮಂಡಳಿ ಆಸ್ತಿಯಾಗಿದ್ದರೆ ಇಷ್ಟು ದಿನ ನಾಮಫಲಕ ಹಾಕದೆ ಬಿಡುತ್ತಿರಲಿಲ್ಲ ಎಂದಿದ್ದಾರೆ. ಜಮೀರ್ ಅಹಮದ್, ರಿಜ್ವಾನ್ ಅರ್ಷದ್ ಮತ್ತು ಇನ್ನೂ ಇಬ್ಬರು ಪಾಲಿಕೆ ಮಾಜಿ ಸದಸ್ಯರ ಜತೆ ತುಷಾರ್ ಗಿರಿನಾಥ್ ಅವರು ವಾರದ ಹಿಂದೆ ಗೌಪ್ಯ ಸಭೆ ನಡೆಸಿದ್ದಾರೆ.

ಇದರ ಚಿತ್ರಗಳು ನನ್ನ ಬಳಿ ಇವೆ. ಸಭೆಯ ಬಳಿಕ ಜಮೀರ್ ಆಗಲಿ, ತುಷಾರ್ ಗಿರಿನಾಥ್ ಆಗಲಿ ಮಾಹಿತಿ ನೀಡಿಲ್ಲ. ಇದನ್ನು ಗಮನಿಸಿದರೆ ನಡೆಯಬಾರದ ಡೀಲ್ ನಡೆದಿದೆ ಎಂಬುದು ಸ್ಪಷ್ಟ ಎಂದು ಅವರು ಹೇಳಿದ್ದಾರೆ

Join Whatsapp