ಹಿಜಾಬನ್ನು ಪೊಲೀಸ್ ಸಮವಸ್ತ್ರದ ಭಾಗವಾಗಿ ಮಾಡುವ ಮೂಲಕ ನ್ಯೂಜಿಲೆಂಡ್ ಇತಿಹಾಸ ಸೃಷ್ಟಿಸಿದೆ. ನ್ಯೂಜಿಲೆಂಡ್ ಪೊಲೀಸ್ ಪಡೆಗೆ ಹೊಸದಾಗಿ ನೇಮಕಗೊಂಡ ಕಾನ್‌ಸ್ಟೆಬಲ್ ಸೀನಾ ಅಲಿ, ಹಿಜಾಬ್ ಧರಿಸಿದ ಮೊದಲ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.
ಸೇನೆಯಲ್ಲಿ ವೈವಿಧ್ಯತೆಯು ಮುಖ್ಯವಾಗಿದೆ ಮತ್ತು ಮುಂದಿನ ಪೀಳಿಗೆಗೆ ಸೇವೆ ಸಲ್ಲಿಸಲು ಇದು ಅತ್ಯಗತ್ಯವಾಗಿರುತ್ತದೆ ಎಂದು ನ್ಯೂಜಿಲೆಂಡ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಧಿಕಾರಿಗಳ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡು 2018 ರಿಂದ ಸಮವಸ್ತ್ರದಲ್ಲಿ ಬದಲಾವಣೆಗಳನ್ನು ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಜಾಬ್ ಸಮವಸ್ತ್ರವನ್ನು ಬಿಡುಗಡೆ ಮಾಡಿರುವುದರಲ್ಲಿ ತಾನು ಹೆಮ್ಮೆ ಪಡುತ್ತಿರುವುದಾಗಿ ಸೀನಾ ಅಲಿ ಹೇಳಿದ್ದಾರೆ.
ಇನ್ನೂ ಅನೇಕ ಮುಸ್ಲಿಂ ಮಹಿಳೆಯರು ಸೈನ್ಯಕ್ಕೆ ಸೇರಬೇಕು, ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪೊಲೀಸ್ ಇಲಾಖೆಗೆ ಸೇರಲು ನಿರ್ಧರಿಸಿದ್ದೇನೆ ಎಂದು ಸೀನಾ ಅಲಿ ಹೇಳಿದ್ದಾರೆ