ಬಿಜೆಪಿ ಕಾರ್ಯಕರ್ತನ ಕೊಲೆ

Prasthutha|

ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಥಳಿಸಿ ಕೊಲ್ಲಲಾಗಿದೆ. ದಾಳಿಕೋರರು ಆಡಳಿತರೂಢ ತೃಣಮೂಲ ಕಾಂಗ್ರೆಸ್ ನ ಸದಸ್ಯರಾಗಿದ್ದರೆಂದು ಆತನ ಕುಟುಂಬ ಮತ್ತು ಬಿಜೆಪಿ ಪ್ರತಿಪಾದಿಸಿದೆ.

ಘಟನೆಗೆ ಸಂಬಂಧಿಸಿದಂತೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ. ಬಿಜೆಪಿ ಇಂದು ಸಂಜೆ ಮೃತದೇಹವನ್ನು ಇಟ್ಟು ರಸ್ತೆ ತಡೆ ನಡೆಸಿತು ಮತ್ತು 12 ಗಂಟೆಗಳ ಕಾಲ ಸ್ಥಳೀಯ ಬಂದ್ ಗೆ ಕರೆ ನೀಡಿತು.

- Advertisement -

ಪೊಲೀಸರ ಪ್ರಕಾರ ತುಫಾನ್ ಗಂಜ್ ಪಟ್ಟಣದಲ್ಲಿ ಇಂದು ಬೆಳಗ್ಗೆ ತನ್ನ ಅಂಗಡಿಯ ಮುಂದೆ ನಡೆಯುತ್ತಿದ್ದ ಕಾದಾಟದಲ್ಲಿ ತೊಡಗಿದ್ದ ಗುಂಪನ್ನು ತಡೆಯುವುದಕ್ಕಾಗಿ 50ರ ಹರೆಯದ ಕಲಚಂದ್ ಕರ್ಮಕಾರ್ ಪ್ರಯತ್ನಿಸಿದ್ದರು. ಈ ವೇಳೆ ಥಳಿತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ.

- Advertisement -