ಕೋಲ್ಕತ್ತಾ: ದೀದಿ ಮಮತಾ ಅವರನ್ನು ಸೋಲಿಸಲು ದೆಹಲಿಯಿಂದ ಯಾರೂ ಬರಬೇಕಾಗಿಲ್ಲ. ಇಲ್ಲಿನ ಜನತೆಯೇ ಸ್ಪಷ್ಟ ಆದೇಶ ನೀಡುವ ದಿನ ದೂರವಿಲ್ಲ. ಇಲ್ಲಿನ ಜನಸ್ತೋಮ ನೋಡಿದರೆ ಮಮತಾ ಸರ್ಕಾರದ ವಿರುದ್ಧ ಜನರ ಆಕ್ರೋಶ ಯಾವ ರೀತಿ ಇದೆ ಎಂಬುದು ತಿಳಿಯುತ್ತದೆ ಎಂದು ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಚಟುವಟಿಕೆಗಳನ್ನು ಚುರುಕುಗೊಳಿಸಲು ಪಶ್ಚಿಮ ಬಂಗಾಳಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಕನಸಿನ ಸೋನಾರ್ ಬಾಂಗ್ಲಾ ಕನಸು ಭಗ್ನಗೊಳಿಸುತ್ತಿರುವ ದೀದಿ ಮಮತಾ ಅವರು ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಅದಲ್ಲದೇ ಸುಮಾರು 300ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ರಾಜಕೀಯ ದ್ವೇಷಕ್ಕೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಎರಡು ದಿನಗಳ ಪ್ರವಾಸದಲ್ಲಿ ಬೃಹತ್ ರೋಡ್ ಶೋ, ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
“ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸೀಟುಗಳಿಂದ ಬಿಜೆಪಿ ಸರ್ಕಾರ ರಚಿಸಲಿದೆ” ಎಂದು ಬೋಲ್ ಪುರದ ರೋಡ್ ಶೋನಲ್ಲಿ ಹೇಳಿದ್ದಾರೆ.