ಮಂಡ್ಯ | ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ | 2 ವರ್ಷದ ಕಂದಮ್ಮನ ಮಹತ್ತರ ಸಾಧನೆ

Prasthutha|

ಮಂಡ್ಯದ 2 ವರ್ಷ 8 ತಿಂಗಳ ಅಸಾಧಾರಣ ನೆನಪಿನ ಶಕ್ತಿಯ ಪುಟ್ಟ ಕಂದಮ್ಮ ಮೌಲ್ಯ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2020 ರಲ್ಲಿ ತನ್ನ ಹೆಸರು ದಾಖಲಿಸಿಕೊಂಡು ಮಹತ್ತರ ಸಾಧನೆ ಮಾಡಿ ಕನ್ನಡಿಗರ ಹೆಮ್ಮೆಗೆ ಪಾತ್ರಳಾಗಿದ್ದಾಳೆ.

- Advertisement -

ಅಸಾಧಾರಣ ನೆನಪಿನ ಶಕ್ತಿಯ ಮೌಲ್ಯ, 32 ವಿಭಾಗದ ಸಾವಿರಾರು ಹೆಸರುಗಳನ್ನು ಹೇಳುವುದರ ಜೊತೆಗೆ ಪದ್ಯ, ಶ್ಲೋಕ, ಕಥೆಗಳನ್ನು ಹೇಳುತ್ತಾಳೆ.

ಅದಲ್ಲದೇ 32 ರಾಷ್ಟ್ರದ ಹೆಸರು, ರಾಜಧಾನಿ, ಅಲ್ಲಿನ ಪ್ರಸಿದ್ಧತೆಯ ಬಗ್ಗೆ, ಸೌರವ್ಯೂಹದ ಗ್ರಹಗಳು, ಕನ್ನಡ, ಇಂಗ್ಲಿಷ್ ವರ್ಣಮಾಲೆ, ಪದಗಳ ರಚನೆ, ಹಣ್ಣುಗಳು, ಪುಷ್ಪಗಳು, ಸಂಖ್ಯೆ, ಪ್ರಕೃತಿಯ ವಸ್ತುಗಳ ಹೆಸರುಗಳನ್ನು ಹೇಳುತ್ತಾಳೆ.

- Advertisement -

 ಮಾತ್ರವಲ್ಲದೇ ಋತುಗಳು, ವಿಜ್ಞಾನಿಗಳ ಹೆಸರು, ಅವರ ಅನ್ವೇಷಣೆ, ರಾಷ್ಟ್ರಗಳ ಪ್ರಾಣಿ, ಪುಷ್ಪ, ಲಾಂಛನ ಯಾವುದನ್ನೇ ಕೇಳಿದ್ರು ಥಟ್ ಅಂತ ಉತ್ತರ ಹೇಳುವ ಈ ಪುಟ್ಟ ಕಂದಮ್ಮನ ಹೆಸರು ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2020 ರಲ್ಲಿ ದಾಖಲಾಗಿದೆ.

ಮಗಳ ಪ್ರತಿಭೆ ಗಿನ್ನಿಸ್ ರೆಕಾರ್ಡ್ ನಲ್ಲಿ ಕೂಡ ದಾಖಲಾಗುವ ಸಾಧ್ಯತೆ ಇದೆ ಎಂದು ಈಕೆಯ ತಾಯಿ ಹೇಳಿದ್ದಾರೆ. ಮತ್ತಷ್ಟು ತರಬೇತಿಯ ಮೂಲಕ ಈ ಪುಟಾಣಿ ಕಂದಮ್ಮಳನ್ನು ಮತ್ತಷ್ಟು ಚುರುಕುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಮೌಲ್ಯ ಮಂಡ್ಯ ತಾಲೂಕಿನ ಬಸರಾಳು ಗ್ರಾಮದ ತೊಂಟೇಶ್ ಎಂಬವರ ಮೊಮ್ಮಗಳು. ಈ ಮುದ್ದು ಕಂದಮ್ಮಳ ಸಾಧನೆಗೆ ಕುಟುಂಬ ಸೇರಿದಂತೆ ಇಡೀ ಊರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Join Whatsapp