ತೀಸ್ತಾ ಸೆಟಲ್ವಾಡ್ ಬಂಧನವು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ: ಆಮ್ನೆಸ್ಟಿ ಇಂಡಿಯಾ

Prasthutha|

ನವದೆಹಲಿ: ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿರುವುದನ್ನು ಖ್ಯಾತ ಮಾನವ ಹಕ್ಕುಗಳ ಸಂಘಟನೆ ಅಮ್ನೆಸ್ಟಿ ಇಂಡಿಯಾ ತೀವ್ರವಾಗಿ ಖಂಡಿಸಿದೆ.

- Advertisement -

ಈ ಕೂಡಲೇ ತೀಸ್ತಾ ಅವರನ್ನು ಬಿಡುಗಡೆಗೊಳಿಸುವಂತೆ ಆಮ್ನೆಸ್ಟಿ ಇಂಡಿಯಾ ಆಗ್ರಹಿಸಿದೆ.

ಆಕೆಯ ಬಂಧನವು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದ ನೀಚ ಕೃತ್ಯ. ಈ ಕೃತ್ಯವು ಆಡಳಿತದ ವಿರುದ್ಧ ಧ್ವನಿಯೆತ್ತುತ್ತಿರುವ ಭಿನ್ನಮತಗಳ ಸ್ವಾತಂತ್ರ್ಯವನ್ನು ಕುಗ್ಗಿಸುವ ಷಡ್ಯಂತ್ರ ಎಂದು ಸಂಸ್ಥೆ ವಿಷಾದ ವ್ಯಕ್ತಪಡಿಸಿದೆ.

- Advertisement -

2002ರ ಗುಜರಾತ್ ಗಲಭೆಯಲ್ಲಿ ಮೋದಿ ಮತ್ತಿತರರನ್ನು ಸುಪ್ರೀಂ ಕೋರ್ಟ್ ದೋಷಮುಕ್ತಗೊಳಿಸಿದ ಬಳಿಕ ತೀಸ್ತಾ ಅವರನ್ನು ಬಂಧಿಸಲಾಗಿತ್ತು.

Join Whatsapp