ಟಿ20 ವಿಶ್ವಕಪ್ : ಪಾಕಿಸ್ತಾನವನ್ನು 4 ವಿಕೆಟ್ ಗಳಿಂದ ಮಣಿಸಿದ ಭಾರತ

Prasthutha|

ಸಿಡ್ನಿ: ಟಿ20 ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 4 ವಿಕೆಟ್ ಗಳಿಂದ ಸೋಲಿಸಿದೆ.

- Advertisement -

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ 8 ವಿಕೆಟ್‌ಗಳ ನಷ್ಟಕ್ಕೆ 159ರನ್‌ಗಳನ್ನು ಪೇರಿಸಿ ಭಾರತಕ್ಕೆ 160ರನ್‌ಗಳ ಸವಾಲನ್ನು ನೀಡಿತ್ತು.

ಇನ್ನು ಗುರಿ ಬೆನ್ನಟ್ಟಿದ ಭಾರತ ಆರಂಭಿಕ ವೈಫಲ್ಯದ ಹೊರತಾಗಿಯೂ ವಿರಾಟ್‌ ಕೊಹ್ಲಿ(82 ರನ್‌, 53 ಎಸೆತ, 6 ಬೌಂಡರಿ, 4 ಸಿಕ್ಸರ್‌) ಹಾಗೂ ಹಾರ್ದಿಕ್‌ ಪಾಂಡ್ಯ(40 ರನ್‌, 37 ಎಸೆತ, 1 ಬೌಂಡರಿ, 2 ಸಿಕ್ಸರ್‌) ಆಲ್ರೌಂಡ್‌ ಆಟದ ಫಲವಾಗಿ ಭಾರತ 6 ವಿಕೆಟ್‌ಗಳ ನಷ್ಟಕ್ಕೆ 20 ಓವರ್‌ಗಳಲ್ಲಿ 160ರನ್‌ಗಳನ್ನು ಗಳಿಸಿ ಪಾಕಿಸ್ತಾನದ ವಿರುದ್ದ ತನ್ನ ಹಳೇ ಸೇಡನ್ನು ತೀರಿಸಿಕೊಂಡಿದೆ.

Join Whatsapp