ನವದೆಹಲಿ: ಕೋವಿಡ್ ಸಾಂಕ್ರಾಮಿಕದಿಂದ ಜಗತ್ತು ತತ್ತರಿಸುತ್ತಿರುವಾಗ ಚೀನಾದಿಂದ ಮತ್ತೊಂದು ವೈರಸ್ ಬರುವ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಚ್ಚರಿಸಿದೆ. ಕ್ಯಾಟ್ ಕ್ಯೂ (ಎಸ್.ಕ್ಯೂ.ವಿ) ಎಂದು ಕರೆಯಲ್ಪಡುವ ಮತ್ತೊಂದು ಚೀನೀ ವೈರಸ್ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಬಹುದು ಎಂದು ಐಸಿಎಂಆರ್ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ನ ಇತ್ತೀಚಿನ ಸಂಚಿಕೆಯಲ್ಲಿ ಈ ಕುರಿತು ಅಧ್ಯಯನವನ್ನು ಪ್ರಕಟಿಸಲಾಗಿದೆ. ಸಿಕ್ಯೂ ಹರಡುವಿಕೆಯನ್ನು ಅರ್ಥಮಾಡಿಕೊಳ್ಳಲು ದೇಶದಲ್ಲಿ ಹೆಚ್ಚಿನ ಮಾದರಿಗಳನ್ನು ಪರೀಕ್ಷಿಸುವ ಅಗತ್ಯವಿದೆ ಎಂದು ಅಧ್ಯಯನ ಹೇಳಿದೆ. ಎಸ್.ಕ್ಯೂ.ವಿ ಎಂಬುದು ಆರ್ತ್ರೋಪೋಡ್ ಬೋನ್ ವಿಭಾಗಕ್ಕೆ ಸೇರಿದ ವೈರಸ್.
ಚೀನಾ ಮತ್ತು ವಿಯೆಟ್ನಾಂನಲ್ಲಿನ ಕ್ಯುಲೆಕ್ಸ್ ಸೊಳ್ಳೆಗಳು ಮತ್ತು ಹಂದಿಗಳಲ್ಲಿ ಕ್ಯಾಟ್ ಕ್ಯೂ ವೈರಸ್ ಈಗಾಗಲೇ ವರದಿಯಾಗಿದೆ. ಈ ವೈರಸ್ ಮನುಷ್ಯರಲ್ಲಿ ಜ್ವರ ಹಾಗೂ ಇತರ ಅನಾರೋಗ್ಯಗಳಿಗೆ ಕಾರಣವಾಗಬಹುದು ಎಂದು ಐಸಿಎಂಆರ್ ವಿಜ್ಞಾನಿಗಳು ಹೇಳಿದ್ದಾರೆ.