ನಿರ್ದಯ ಸರಕಾರವು ಆಕೆಯನ್ನು ಕೊಂದುಹಾಕಿತು: ಹಥ್ರಾಸ್ ಪ್ರಕರಣದ ಕುರಿತು ಸೋನಿಯಾ

Prasthutha|

ಹೊಸದಿಲ್ಲಿ: ಹಥ್ರಾಸ್ ನಲ್ಲಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರವಾಗಿ ಟೀಕಿಸಿದ್ದು, ‘ಆಕೆಯನ್ನು ನಿರ್ದಯ ಸರಕಾರವು ವಧಿಸಿದೆ’ ಎಂದಿದ್ದಾರೆ.

- Advertisement -

“ವಿಷಯವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಹುಡುಗಿಗೆ ಸಮಯೋಚಿತ ಚಿಕಿತ್ಸೆ ನೀಡಲಾಗಿಲ್ಲ. ಹಾಗಾಗಿ ಓರ್ವ ಮಗಳು ನಮ್ಮೊಂದಿಗಿಲ್ಲ. ಹಥ್ರಾಸ್ ನ ನಿರ್ಭಯ ನಮ್ಮೊಂದಿಗಿಲ್ಲ. ನಿರ್ದಯ ಸರಕಾರ, ಅದರ ಆಡಳಿತ ಮತ್ತು ಉತ್ತರ ಪ್ರದೇಶ ಸರಕಾರದ ಅಸಡ್ಡೆಯಿಂದಾಗಿ ಕೊಲ್ಲಲ್ಪಟ್ಟಿದ್ದಾಳೆ” ಎಂದು ಸೋನಿಯಾ ಗಾಂಧಿ, ತಾನು ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

“ಆಕೆ ಜೀವಂತವಾಗಿರುವಾಗ ಆಕೆಯನ್ನು ಆಲಿಸಲಾಗಿಲ್ಲ, ಆಕೆಯನ್ನು ರಕ್ಷಿಸಲಾಗಿಲ್ಲ ಮತ್ತು ಮರಣದ ನಂತರ ಆಕೆಗೆ ಆಕೆಯ ಮನೆಗೆ ಹೋಗುವ ಹಕ್ಕನ್ನೂ ಕಸಿಯಲಾಯಿತು. ಆಕೆಯನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗುವುದಿಲ್ಲ. ರೋದಿಸುತ್ತಿರುವ ಓರ್ವ ತಾಯಿ ಆಕೆಯ ಪುತ್ರಿಗೆ ಅಂತಿಮ ಯಾತ್ರೆಯನ್ನು ಹೇಳುವ ಅವಕಾಶವನ್ನೂ ನೀಡಲಿಲ್ಲ. ಯಾವ ರೀತಿಯ ಸರಕಾರ ಇದು” ಎಂದು ಅವರು ಪ್ರಶ್ನಿಸಿದ್ದಾರೆ.

Join Whatsapp