ಗಾಂಧಿ ಹಂತಕನ ಹೆಸರಿನಲ್ಲಿ ಗ್ರಂಥಾಲಯ

Prasthutha|

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಂತಕ ನಾಥೂರಾಂ ಗೋಡ್ಸೆ ಹೆಸರಿನಲ್ಲಿ ಬಲಪಂಥೀಯ ಸಂಘಟನೆ ಅಖಿಲ ಭಾರತೀಯ ಹಿಂದೂ ಮಹಾ ಸಭಾ ರವಿವಾರದಂದು ಮಧ್ಯಪ್ರದೇಶದ ಗ್ವಾಲಿಯಾರ್ ನಲ್ಲಿ ಲೈಬ್ರರಿಯೊಂದನ್ನು ತೆರೆದಿದ್ದು, ಗೋಡ್ಸೆಯ ಜೀವನ ಮತ್ತು ಸಿದ್ಧಾಂತಕ್ಕಾಗಿ ಅದನ್ನು ಸಮರ್ಪಿಸಿದೆ ಎಂದು ಎ.ಎನ್.ಐ ವರದಿ ಮಾಡಿದೆ. ಗೋಡ್ಸೆ ಸಮರ್ಥಿಸಿದ ನೈಜ ರಾಷ್ಟ್ರೀಯತೆಯನ್ನು ಯುವಕರಲ್ಲಿ ತುಂಬುವುದಕ್ಕಾಗಿ ಇದನ್ನು ಸ್ಥಾಪಿಸಲಾಗಿದೆ ಎಂದು ಹಿಂದುತ್ವ ಸಂಘಟನೆ ಹೇಳಿದೆ.

- Advertisement -

ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ ನಗರದ ದೌಲತ್ ಗಂಜ್ ಪ್ರದೇಶದ ಹಿಂದೂ ಮಹಾಸಭಾ ಕಚೇರಿಯಲ್ಲಿ ಗೋಡ್ಸೆ ಜ್ನಾನ ಶಾಲಾವನ್ನು ಉದ್ಘಾಟಿಸಲಾಗಿದೆ. ಗೋಡ್ಸೆ ಹೇಗೆ ಹತ್ಯೆಯ ಯೋಜನೆ ರೂಪಿಸಿದ ಎಂಬ ಸಾಹಿತ್ಯವನ್ನೊಳಗೊಂಡಂತೆ ಆತನ ಲೇಖನಗಳು ಮತ್ತು ಭಾಷಣಗಳು ಲೈಬ್ರರಿಯಲ್ಲಿವೆ.

ಭಾರತದ ವಿಭಜನೆಯ ಆಯಾಮಗಳನ್ನು ಯುವ ಪೀಳಿಗೆಗೆ ಲೈಬ್ರರಿ ಒದರಿಸಲಿದೆ ಮತ್ತು ಹಲವು ರಾಷ್ಟ್ರೀಯ ನಾಯಕರುಗಳ ಕುರಿತ ಮಾಹಿತಿ ಹಾಗೂ ಜ್ನಾನವನ್ನು ಒದಗಿಸಲಿದೆ ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭಾರದ್ವಜ್ ಹೇಳಿದ್ದಾರೆ.

- Advertisement -

“ಗೋಡ್ಸೆ ಅನುಸರಿಸಿದ ನಿಜವಾದ ರಾಷ್ಟ್ರೀಯತೆಯನ್ನು ಲೈಬ್ರರಿ ಜಗತ್ತಿನ ಮುಂದೆ ಇಡಲಿದೆ” ಎಂದು ಭಾರದ್ವಜ್ ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.



Join Whatsapp