ರಾಮ ಮಂದಿರ ನಿರ್ಮಾಣ| ರಾಷ್ಟ್ರಪತಿ ಮತ್ತು ಪ್ರಧಾನಿ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಲಿದ್ದಾರೆ: ವಿಹೆಚ್‌ಪಿ

Prasthutha|

- Advertisement -

ಅಹಮದಾಬಾದ್: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವಿಶ್ವ ಹಿಂದೂ ಪರಿಷತ್ ದೇಣಿಗೆ ಸಂಗ್ರಹಿಸಲು ಸಜ್ಜಾಗಿದೆ.
ಜನವರಿ 14 ಮಕರ ಸಂಕ್ರಾಂತಿ ದಿನದಂದು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಲಿದ್ದಾರೆ.

ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ನಟರು, ಬರಹಗಾರರು ಮತ್ತು ಕವಿಗಳ ಸಹಯೋಗದೊಂದಿಗೆ ದೇಣಿಗೆ ಸಂಗ್ರಹಣೆ ನಡೆಯಲಿದೆ ಎಂದು ವಿಹೆಚ್‌ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಂದೆ ಅಹಮದಾಬಾದ್‌ನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

- Advertisement -

ದೇಣಿಗೆ ಸಂಗ್ರಹಕ್ಕಾಗಿ ಕಾರ್ಪೊರೇಟ್‌ಗಳನ್ನು ಸಂಪರ್ಕಿಸುತ್ತೀರಾ ಎಂಬ ಪ್ರಶ್ನೆಗೆ, ದೇಣಿಗೆ ನೀಡಲು ಇಚ್ಛಿಸುವ ಯಾರಿಂದಲೂ ಹಣವನ್ನು ಸ್ವೀಕರಿಸುವುದಾಗಿ ಪರಂದೆ ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಗುಜರಾತ್‌ನಲ್ಲಿ ಒಂದು ಕೋಟಿ ಜನರಿಂದ ದೇಣಿಗೆ ಸಂಗ್ರಹಿಸುವ ಗುರಿ ಇದೆ. ವಿಎಚ್‌ಪಿ ದೇಣಿಗೆ ಸಂಗ್ರಹದ ಭಾಗವಾಗಿ ವಡೋದರಾದಲ್ಲಿ ಒಂದು ಕಚೇರಿಯನ್ನು ತೆರೆದಿದೆ.

Join Whatsapp