ಖಾಸಗಿ ಆಸ್ಪತ್ರೆಯಲ್ಲೂ ಕೋವಿಶೀಲ್ಡ್ । ಉಚಿತ ಲಸಿಕೆಯ ಯೋಜನೆ ಕೈಬಿಟ್ಟ ಸರಕಾರ!

Prasthutha|

ಜನವರಿ 16ರಂದು ಪ್ರಾರಂಭವಾದ ವ್ಯಾಕ್ಸಿನೇಷನ್ ಡ್ರೈವ್ ಮಾರ್ಚ್ 1ರಂದು ಎರಡನೇ ಹಂತಕ್ಕೆ ಪ್ರವೇಶಿಸಲಿದೆ. ಆದರೆ ಎರಡನೇ ಹಂತದ ವ್ಯಾಕ್ಸಿನೇಷನ್‌ನಲ್ಲಿ ಖಾಸಗಿ ಆಸ್ಪತ್ರೆಗಳು ಪ್ರತಿ ಡೋಸೇಜ್‌ಗೆ ₹250 ವರೆಗೆ ಶುಲ್ಕ ವಿಧಿಸುತ್ತದೆ. 28 ದಿನಗಳ ಅಂತರದಲ್ಲಿ ತೆಗೆದುಕೊಳ್ಳಬೇಕಾದ ಎರಡು ಡೋಸ್‌ಗಳಿಗೆ ₹500 ವೆಚ್ಚವಾಗಲಿದೆ. ಇದು ಮಾರ್ಚ್ 1ರಿಂದ ಪ್ರಾರಂಭವಾಗುತ್ತದೆ ಎಂದು ಸರ್ಕಾರಿ ಮೂಲಗಳು ವರದಿ ಮಾಡಿದೆ.

- Advertisement -

ಹಲವಾರು ರಾಜಕೀಯ ಪಕ್ಷಗಳು ಎಲ್ಲರಿಗೂ ಉಚಿತ ಲಸಿಕೆ ನೀಡುವ ಭರವಸೆ ನೀಡಿದ್ದವು. ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಸೇರಿದಂತೆ ಹಲವಾರು ಮುಖ್ಯಮಂತ್ರಿಗಳು, ಎಲ್ಲರಿಗೂ ಉಚಿತ ಲಸಿಕೆಗಳನ್ನು ಪಿಎಂ ಮೋದಿಯವರನ್ನು ಒತ್ತಾಯಿಸಿದ್ದರು. ಆದರೆ ವ್ಯಾಕ್ಸಿನೇಷನ್ ಡ್ರೈವ್ ನಿರ್ಣಾಯಕ ಎರಡನೇ ಹಂತಕ್ಕೆ ಪ್ರವೇಶಿಸುತ್ತಿದ್ದಂತೆ, ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಷನ್ ಉಚಿತವಾಗಿರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆ, ಆಯುಷ್ಮಾನ್ ಭಾರತ್ ಮತ್ತು ಅಂತಹುದೇ ರಾಜ್ಯ ಆರೋಗ್ಯ ವಿಮಾ ಯೋಜನೆಗಳ ಅಡಿಯಲ್ಲಿ ಎಂಪನೇಲ್ ಮಾಡಲಾದ ಖಾಸಗಿ ಆಸ್ಪತ್ರೆಗಳೂ ಲಸಿಕೆಗಳಿಗೆ ಶುಲ್ಕ ವಿಧಿಸಲಿವೆ ಎಂದು ಹೇಳಲಾಗಿದೆ.

Join Whatsapp