ನವ ವಧು ಹೃದಯಾಘಾತದಿಂದ ನಿಧನ

Prasthutha|

ಮಂಗಳೂರು : ನಿನ್ನೆ ವಿವಾಹವಾಗಿದ್ದ ಮದುಮಗಳು ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆಯೊಂದು ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಬಳಿ ನಡೆದಿದೆ.

- Advertisement -

ಅಡ್ಯಾರ್ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷರಾದ ಕೆಎಚ್‌ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಮಗಳು ಲೈಲಾ ಆಫಿಯಾ(23) ಎಂಬಾಕೆಯೇ ಮೃತಪಟ್ಟವರು.

ನಿನ್ನೆ ಲೈಲಾ ವಿವಾಹ ಕಣ್ಣೂರಿನ ಮುಬಾರಕ್ ಎಂಬವರೊಂದಿಗೆ ನಡೆದಿತ್ತು. ಅಡ್ಯಾರ್ ಗಾರ್ಡನ್‌ನಲ್ಲಿ ಔತಣಕೂಟವನ್ನೂ ಏರ್ಪಡಿಸಲಾಗಿತ್ತು. ಆ ಬಳಿಕ ನವಜೋಡಿಗಳು ಆಫಿಯಾ ಮನೆಯಲ್ಲಿ ಇದ್ದರು. ಇಂದು ಬೆಳಿಗ್ಗಿನ ಜಾವ 3ಗಂಟೆಗೆ ಲೈಲಾ ಆಫಿಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

- Advertisement -