ಕ್ಯಾಪಿಟೋಲ್ ಕಟ್ಟಡ ದಾಳಿ| ಭಾರತೀಯ ಧ್ವಜ ಹಿಡಿದ ವ್ಯಕ್ತಿಯ ವಿರುದ್ಧ ದೂರು

Prasthutha|

- Advertisement -

ಅಮೆರಿಕದ ಕ್ಯಾಪಿಟೋಲ್ ಕಟ್ಟಡ ದಾಳಿಯಲ್ಲಿ ಭಾರತದ ರಾಷ್ಟ್ರೀಯ ಧ್ವಜದೊಂದಿಗೆ ಭಾಗವಹಿಸಿದ್ದ ವಿನ್ಸೆಂಟ್ ಕ್ಸೇವಿಯರ್ ಪಾಲತಿಂಗಲ್ ವಿರುದ್ಧ ದೆಹಲಿ ಕಲ್ಕಾಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ವಕೀಲರು ವಿನ್ಸೆಂಟ್ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಪ್ರಕರಣ ದಾಖಲಿಸಬೇಕೆ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ಟ್ರಂಪ್ ಅವರ ಬೆಂಬಲಿಗರು ಕ್ಯಾಪಿಟೋಲ್ ಕಟ್ಟಡಕ್ಕೆ ನುಗ್ಗಿದ್ದರು. ಇವರೊಂದಿಗೆ ವಿನ್ಸೆಂಟ್ ಕ್ಸೇವಿಯರ್ ಕೂಡ ಭಾರತದ ರಾಷ್ಟ್ರೀಯ ಧ್ವಜದೊಂದಿಗೆ ಉಪಸ್ಥಿತರಿದ್ದರು. ಭಾರತದ ರಾಷ್ಟ್ರಧ್ವಜವನ್ನು ದುರುಪಯೋಗಪಡಿಸಿಕೊಂಡ ವಿನ್ಸೆಂಟ್ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

- Advertisement -

ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಚುನಾವಣೆಯ ವಿಜಯವನ್ನು ಅಲ್ಲಿನ ಸಂಸತ್ತು ಅಧಿಕೃತವಾಗಿ ಪ್ರಮಾಣೀಕರಿಸುವ ವೇಳೆ ಈ ಹಿಂಸಾತ್ಕಕ ದಾಳಿ ನಡೆಸಲಾಗಿತ್ತು. ಸುಮಾರು ನಾಲ್ಕು ಗಂಟೆಗಳ ಕಾಲ ಸತತ ಪ್ರಯತ್ನದಿಂದ ಪೊಲೀಸರು ದಾಳಿಕೋರರನ್ನು ಚದುರಿಸಿದ್ದರು.
ಈ ಹಿಂಸಾಚಾರದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐದು ಜನರು ಸಾವನ್ನಪ್ಪಿದ್ದರು.



Join Whatsapp