ಭಾರತಕ್ಕೆ ವೈದ್ಯಕೀಯ ಸರಕು ಸಾಗಾಣೆ ವಿಮಾನಯಾನ ರದ್ದುಪಡಿಸಿದ ಚೀನಾ

Prasthutha|

ಭಾರತದಲ್ಲಿ ಕೋವಿಡ್-19 ಹೆಚ್ಚಾಗುತ್ತಿದ್ದಂತೆಯೇ ಚೀನಾ ವೈದ್ಯಕೀಯ ಸರಕು ಸಾಗಾಣೆ ವಿಮಾನಯಾನವನ್ನು ರದ್ದು ಮಾಡಿದೆ.

- Advertisement -

ಚೀನಾ ದೇಶದ ಸರ್ಕಾರಿ ಸಿಚುವಾನ್ ಏರ್ಲೈನ್ಸ್ 15 ದಿನಗಳ ಕಾಲ ಭಾರತಕ್ಕೆ ತನ್ನ ಎಲ್ಲ ಸರಕು ವಿಮಾನಗಳ ಪ್ರಯಾಣವನ್ನು ರದ್ದುಗೊಳಿಸಿದ್ದು, ಇದರಿಂದಾಗಿ ದೇಶಕ್ಕೆ ಬರಬೇಕಿದ್ದ ವೈದ್ಯಕೀಯ ಪರಿಕರಗಳ ರವಾನೆಗೆ ತೊಡಕುಂಟಾಗಿದೆ. ದೇಶಕ್ಕೆ ಅಗತ್ಯವಿರುವ ಆಮ್ಲಜನಕ ಸಾಂದ್ರಕಗಳು ಮತ್ತು ಇತರೆ ವೈದ್ಯಕೀಯ ಉಪಕರಣಗಳನ್ನು ಖರೀದಿಸುವ ಭಾರತದ ಪ್ರಯತ್ನಕ್ಕೆ ಈ ಮೂಲಕ ದೊಡ್ಡ ಹಿನ್ನಡೆಯುಂಟಾಗಿದೆ.

ಸಿಚುವಾನ್ ಏರ್ ಲೈನ್ಸ್ ನ ಭಾಗವಾಗಿರುವ ಸಿಚುವಾನ್ ಚುವಾನ್ ಹಾಂಗ್ ಲಾಜಿಸ್ಟಿಕ್ಸ್ ಕಂಪನಿಯು ತನ್ನ ಮಾರಾಟದ ಏಜೆಂಟರಿಗೆ ಸೋಮವಾರ ಈ ಕುರಿತು ಪತ್ರ ಬರೆದಿದ್ದು, ‘ಕ್ಸಿಯಾನ್, ದೆಹಲಿ ಸೇರಿದಂತೆ ಆರು ಮಾರ್ಗಗಳಲ್ಲಿ ತನ್ನ ಸರಕು ವಿಮಾನಗಳ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಭಾರತದಲ್ಲಿ ಸಾಂಕ್ರಾಮಿಕ ರೋಗದ ಸ್ಥಿತಿ ಉಲ್ಬಣಗೊಂಡಿದ್ದು, ಈ ನಿಟ್ಟಿನಲ್ಲಿ ಮುಂದಿನ 15 ದಿನಗಳ ಕಾಲ ವಿಮಾನಯಾನವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಭಾರತಕ್ಕೆ ಸರಕು ಸಾಗಣೆ ವಿಮಾನಗಳನ್ನು ರದ್ದುಪಡಿಸಿರುವುದು ನಮ್ಮ ಸಂಸ್ಥೆಗೆ ದೊಡ್ಡ ನಷ್ಟವುಂಟಾಗಿದೆ. 15 ದಿನಗಳ ನಂತರ ನಿರ್ಧಾರ ಬದಲಾವಣೆ ಮಾಡುವ ಕುರಿತು ಚಿಂತನೆ ನಡೆಸಲಾಗುವುದು’ ಎಂದು ತಿಳಿಸಿದೆ.

Join Whatsapp