ಕೋವಿಡ್ ನ ಎಲ್ಲಾ ನಿರ್ಬಂಧಗಳನ್ನು ರದ್ದುಗೊಳಿಸಿದ ಬ್ರಿಟನ್

Prasthutha|

ಇನ್ನು ಮುಂದೆ ಮಾಸ್ಕ್, ಲಸಿಕೆ ಪ್ರಮಾಣ ಪತ್ರ ಅಗತ್ಯವಿಲ್ಲ

- Advertisement -

ಲಂಡನ್ : ಮುಂದಿನ ಗುರುವಾರದಿಂದ ಕೋವಿಡ್ ಎಲ್ಲಾ ನಿಯಮಗಳನ್ನು ಕೈಬಿಡಲಾಗುವುದು. ಇದರ ಜೊತೆಗೆ ಜನರು ಮನೆಯಿಂದ ಕೆಲಸ ಮಾಡುವಂತೆ ಸರ್ಕಾರ ನೀಡಿರುವ ಸಲಹೆಯನ್ನು ತಕ್ಷಣವೇ ಹಿಂಪಡೆಯಲಾಗುವುದು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಘೋಷಿಸಿದ್ದಾರೆ.
ಕಡ್ಡಾಯವಾಗಿ ಮಾಸ್ಕ್ ಹಾಕುವುದು, ಮನೆಯಿಂದಲೇ ಕೆಲಸ ಹಾಗೂ ಕೋವಿಡ್ ಪಾಸ್ ತೋರಿಸುವುದು ಇವೆಲ್ಲಾ ‘ಪ್ಲಾನ್ ಬಿ’ ಆಗಿತ್ತು. ಇದೀಗ ‘ಪ್ಲಾನ್ ಎ’ಗೆ ಹಿಂದಿರುಗಲಾಗುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಈ ಬಗ್ಗೆ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಕೂಡ ಮಾತನಾಡಿದ್ದು, ಇದು ನಾವೆಲ್ಲರೂ ಹೆಮ್ಮೆಪಡುವ ಕ್ಷಣವಾಗಿದೆ. ಒಗ್ಗಟ್ಟಿನಲ್ಲಿ ಸಾಗಿದರೆ ದೇಶ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇದು ಉದಾಹರಣೆ ಎಂದಿದ್ದಾರೆ.
ಈ ಹಿಂದೆ ಓಮಿಕ್ರಾನ್ ಹರಡುವುದು ತೀವ್ರಗೊಂಡಿದ್ದರಿಂದ ಡಿಸೆಂಬರ್ 8 ರ ವರೆಗೆ ಕಠಿಣ ನಿಯಂತ್ರಣ ಹೇರಲಾಗಿತ್ತು.ಕಳೆದ 24 ಗಂಟೆಗಳಲ್ಲಿ 1,08,069 ಮಂದಿಗೆ ಇಂಗ್ಲೆಂಡಿನಲ್ಲಿ ಕೊರೋನ ಹರಡಿತ್ತು.

Join Whatsapp