ಕೊಲೆಗಾರರಿಗೆ ಟ್ರಂಪ್ ಕ್ಷಮಾದಾನ

Prasthutha|

ವಾಶಿಂಗ್ಟನ್: 2007ರಲ್ಲಿ ಬಗ್ದಾದ್ ನಲ್ಲಿ 9ರ ಹರೆಯದ ಹುಡುಗನನ್ನೊಳಗೊಂಡಂತೆ 14 ನಾಗರೀಕರನ್ನು ಹತ್ಯೆಗೈದ ಪ್ರಕರಣದಲ್ಲಿ ದೋಷಾರೋಪ ಸಾಬೀತಾದ ಖಾಸಗಿ ಭದ್ರತಾ ಸಂಸ್ಥೆಯೊಂದರ ನಾಲ್ವರು ಮಾಜಿ ಗುತ್ತಿಗೆದಾರರಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಷಮಾದಾನವನ್ನು ನೀಡಿದ್ದಾರೆ.

- Advertisement -

ಇರಾಕ್ ನಲ್ಲಿ ಯುಎಸ್ ಸಿಬ್ಬಂದಿಗಳನ್ನು ರಕ್ಷಿಸುವುದಕಾಗಿ ಬ್ಲ್ಯಾಕ್ ವಾಟರ್ ಖಾಸಗಿ ಭದ್ರತಾ ಗುತ್ತಿಗೆ ಸಂಸ್ಥೆಯನ್ನು ನೇಮಿಸಲಾಗಿತ್ತು. ಇದು ಬಗ್ದಾದ್ ನಲ್ಲಿ ತೀವ್ರ ಬಲಪ್ರಯೋಗ ಮಾಡುತ್ತಿದೆಯೆಂದು ಇರಾಕ್ ಸರಕಾರ ಆರೋಪಿಸಿತ್ತು.

ನಾಲ್ವರು ಗುತ್ತಿಗೆದಾರರು ದೋಷಿಗಳೆಂದು ಘೋಷಿಸಲಾಗಿತ್ತು

- Advertisement -

ನಿಕೊಲಸ್ ಸ್ಲಾಟ್ಟನ್, ಪೌಲ್ ಸ್ಲಾಗ್, ಇವಾನ್ ಲಿಬರ್ಟಿ ಮತ್ತು ಡಸ್ಟಿನ್ ಹರ್ಡ್ ವಿರುದ್ಧ ದೋಷ ಸಾಬೀತಾಗಿತ್ತು. ಯುಎಸ್ ಸಿಬ್ಬಂದಿಗಳನ್ನು ಸಾಗಿಸುತ್ತಿದ್ದ ನಾಲ್ಕು ಶಸ್ತ್ರಸಜ್ಜಿತ ವಾಹನಗಳಿಗೆ ಬೆಂಗಾವಲು ನೀಡುವ ಜವಾಬ್ದಾರಿಯನ್ನು ಹೊಂದಿದ್ದ 19 ಗುತ್ತಿಗೆದಾರರಲ್ಲಿ ಈ ನಾಲ್ವರು ಒಳಗೊಂಡಿದ್ದರು.

ಅಮೆರಿಕಾ ನ್ಯಾಯಾಂಗ ಇಲಾಖೆಯ ಪ್ರಕಾರ ಆ ದಿನದ ಸುಮಾರು ಮಧ್ಯಾಹ್ನದ ವೇಳೆ ಹಲವು ಗುತ್ತಿಗೆದಾರರು ನಿಸೂರ್ ಸ್ಕ್ವಾರ್ ನಲ್ಲಿ ಮತ್ತು ಸುತ್ತಮುತ್ತ ಗುಂಡು ಹಾರಾಟ ನಡೆಸಿದ್ದರು. ಅವರು ಗುಂಡು ಹಾರಾಟ ನಿಲ್ಲಿಸುವಾಗ 14 ಇರಾಕಿ ನಾಗರಿಕರು ಸಾವನ್ನಪ್ಪಿದ್ದರು. ಅವರಲ್ಲಿ 10 ಪುರುಷರು, ಇಬ್ಬರು ಮಹಿಳೆಯರು ಮತ್ತು 9 ಹಾಗೂ 11 ವರ್ಷದ ಇಬ್ಬರು ಹುಡುಗರು ಒಳಗೊಂಡಿದ್ದರು.

ಸ್ಲ್ಯಾಟ್ಟನ್  ಪ್ರಥಮ ದರ್ಜೆ ಹತ್ಯೆ ನಡೆಸಿರುವುದು ಸಾಬೀತಾಗಿತ್ತು. 2019ರಲ್ಲಿ ಆತನಿಗೆ ಪೆರೋಲ್ ರಹಿತ ಜಿವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು. ಮರು ವಿಚಾರಣೆಯ ನಂತರ ಸ್ಲೋಗ್, ಲಿಬರ್ಟಿ ಮತ್ತು ಹರ್ಡ್ ರ ಜೈಲು ಶಿಕ್ಷೆಯನ್ನು ಕ್ರಮವಾಗಿ 15, 14 ಮತ್ತು 12 ವರ್ಷಗಳಿಗೆ ತಗ್ಗಿಸಲಾಗಿತ್ತು. ಟ್ರಂಪ್ ನಿರ್ಣಯವನ್ನು ಖಂಡಿಸಿರುವ ಇರಾಕ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ “ಈ ನಿರ್ಧಾರವು ಅಪರಾಧದ ತೀವ್ರತೆಯ ಕುರಿತ ಗಾಂಭೀರ್ಯತೆಯನ್ನು ಪರಿಗಣಿಸಿಲ್ಲ ಮತ್ತು ಸಂತ್ರಸ್ತರ ಸ್ವಾಭಿಮಾನವನ್ನು ಹಾಗೂ ಅವರ ಕುಟುಂಬಸ್ಥರ ಭಾವನೆ ಹಾಗೂ ಹಕ್ಕುಗಳನ್ನು ದುರದೃಷ್ಟಕರವಾಗಿ ತಿರಸ್ಕರಿಸಿದೆ” ಎಂದು ಹೇಳಿದೆ.  

Join Whatsapp