ಕೊರೋನಾ ಸಂಕಷ್ಟ | 2020-21ರಲ್ಲಿ ಗಲ್ಫ್ ಸಹಿತ ಜಾಗತಿಕ ಆರ್ಥಿಕತೆ ತೀವ್ರ ಕುಸಿತ

Prasthutha|

ದುಬೈ : ಕೊರೊನಾ ವೈರಸ್ ವ್ಯಾಪಕ ಹರಡುವಿಕೆಯಿಂದಾಗಿ 2020-21ರಲ್ಲಿ ಗಲ್ಫ್ ಸಹಿತ ಜಾಗತಿಕ ಆರ್ಥಿಕತೆ ತೀವ್ರ ದುರ್ಬಲವಾಗಲಿದೆ. ಇದು ನಿಧಾನಗತಿಯಲ್ಲಿ ಸುಧಾರಿಸಲಿದೆ ಎಂದು ಲೀಚ್ಟೆನ್ ಸ್ಟೈನಿಷ್ ಲ್ಯಾಂಡ್ಸ್ ಬ್ಯಾಂಕ್ ನ ಮುಖ್ಯ ಹೂಡಿಕೆ ಅಧಿಕಾರಿ ಮಾರ್ಕಸ್ ವೈಡ್ ಮ್ಯಾನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

- Advertisement -

ಈ ಪರಿಸ್ಥಿತಿ ಸುಧಾರಿಸಲು ಸಮಯ ತೆಗೆದುಕೊಳ್ಳಲಿದೆ ಎಂದು ಬಹುತೇಕ ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಯುಎಇಗೂ ಇದರ ಬಿಸಿತಟ್ಟಲಿದೆ. ಕೊರೋನಾ ವೈರಸ್ ಸೋಂಕಿನ ಎರಡನೇ ಹಂತದ ಅಲೆ ತಟ್ಟದಿದ್ದರೂ, 2021ರ ಅಂತ್ಯದ ವರೆಗೂ ಕೈಗಾರಿಕಾ ಆಧಾರಿತ ರಾಷ್ಟ್ರಗಳಲ್ಲಿ ಉತ್ಪಾದನಾ ಮಟ್ಟ ಕೆಳಮಟ್ಟದಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ.

ಗಲ್ಫ್ ದೇಶಗಳಲ್ಲಿ ಆರ್ಥಿಕತೆ ಚೇತರಿಸಿಕೊಳ್ಳಲು ಹಲವು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಡಲಾಗಿದೆ. ಗಲ್ಫ್ ಸಹಕಾರಿ ಮಂಡಳಿ (ಜಿಸಿಸಿ) ವ್ಯಾಪ್ತಿಯ ದೇಶಗಳಲ್ಲಿ ಆರ್ಥಿಕ ಸುಧಾರಣೆಗೆ ಹೆಚ್ಚು ಒತ್ತು ನೀಡಬೇಕಿದೆ. ಇಲ್ಲವಾದಲ್ಲಿ ಈ ವಲಯದ ಎಲ್ಲ ರಾಷ್ಟ್ರಗಳ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಅವರು ವೈಡ್ ಮ್ಯಾನ್ ಪಟ್ಟಿದ್ದಾರೆ.

Join Whatsapp