ಬೆಂಗಳೂರು: ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ವೀಡಿಯೋ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ. ವೀಡಿಯೋ ದೆಹಲಿಯ ಕರ್ನಾಟಕ ಭವನದಲ್ಲಿ ಮಾಡಿರುವುದರಿಂದ ಬಿಜೆಪಿ ನಾಯಕರು ಕರ್ನಾಟಕ ಭವನವನ್ನು ಬೆಡ್ ರೂಂ ಅಂದುಕೊಂಡಿದ್ದಾರಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಉದ್ಯೋಗ ಅರಸಿ ಬರುವ ಯುವಸಮುದಾಯಕ್ಕೆ ನೀವು ಏನನ್ನ ಕೊಡಲು ಹೊರಟಿದ್ದೀರಿ? ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯ ಆವರಣದಲ್ಲಿ ಪೊಲೀಸ್ ಅಧಿಕಾರಿಯ ಮೇಲೆಯೇ ಕೈ ಎತ್ತಿದ್ದ ಫೋಟೋವೊಂದನ್ನು ಶೇರ್ ಮಾಡಿದ್ದ ಬಿಜೆಪಿ, ಕಾಂಗ್ರೆಸ್ ನಾಯಕರು ಹೇಳಿದಂತೆ ಕೇಳಲು ಪೊಲೀಸರೇನು ಅಂದು ಕಾಂಗ್ರೆಸ್ ಪಕ್ಷದ ಮನೆಯ ಆಳುಗಳಾಗಿದ್ದರೇ? ಎಂದು ಟ್ವಿಟ್ ಮಾಡಿತ್ತು. ಆ ಟ್ವೀಟ್ನ್ನು ರಿಟ್ವೀಟ್ ಮಾಡಿರುವ ಕಾಂಗ್ರೆಸ್ ದೆಹಲಿಯ ಕರ್ನಾಟಕ ಭವನವನ್ನು ನೀವು ಬೆಡ್ ರೂಮ್ ಅಂದುಕೊಂಡಿದ್ದೀರಾ? ಎಂದು ಮರುಪ್ರಶ್ನೆ ಕೇಳಿದೆ.