ಬಿಜೆಪಿ ಸೋಲಿಸಲು ಚುನಾವಣೆ ನಡೆಯುವ ಐದು ರಾಜ್ಯಗಳ ರೈತರಿಗೆ ಸಂಯುಕ್ತ ಕಿಸಾನ್ ಮೋರ್ಚಾ ಮನವಿ

Prasthutha|

ಹೊಸದಿಲ್ಲಿ: ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆ ವಿರುದ್ಧ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿರುವ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ತನ್ನ ನಾಯಕರನ್ನು ಚುನಾವಣೆ ನಡೆಯುವ ಐದು ರಾಜ್ಯಗಳಿಗೆ ಕಳುಹಿಸಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಅಲ್ಲಿನ ರೈತರಿಗೆ ಮನವಿ ಮಾಡಲಿದ್ದಾರೆ ಎಂದು ರೈತ ಸಂಘಟನೆಯ ಮುಖಂಡರು ಹೇಳಿದ್ದಾರೆ.

- Advertisement -

ದೆಹಲಿ ಗಡಿಯಲ್ಲಿ ವಿವಾದಾತ್ಮಕ ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ 100 ದಿನ ಪೂರ್ಣಗೊಳಿಸುತ್ತಿರುವುದರಿಂದ ಪ್ರತಿಭಟನಾ ನಿರತ ರೈತರು ಮಾರ್ಚ್ 6 ರಂದು ಕೆಎಂಪಿ (ವೆಸ್ಟರ್ನ್ ಪೆರಿಫೆರಲ್) ಎಕ್ಸ್ಪ್ರೆಸ್‌ವೇಯನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಮಾರ್ಚ್ 6 ರಂದು ಬೆಳಗ್ಗೆ 11 ಗಂಟೆಯಿಂದ ಐದು ಗಂಟೆಗಳ ಕಾಲ ಎಕ್ಸ್ಪ್ರೆಸ್‌ವೇಯನ್ನು ವಿವಿಧ ಕಡೆಗಳಲ್ಲಿ ಬಂದ್ ಮಾಡಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಯೋಗೇಂದ್ರ ಯಾದವ್ ತಿಳಿಸಿದ್ದಾರೆ. ಚುನಾವಣೆ ನಡೆಯುವ ಐದು ರಾಜ್ಯಗಳ ರೈತರ ಮನವೊಲಿಸಲು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಮಾರ್ಚ್ 12 ರಂದು ಕೋಲ್ಕತ್ತಾದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

 “ಎಸ್‌ಕೆಎಂ ತಂಡಗಳು ಪಶ್ಚಿಮ ಬಂಗಾಳ ಮತ್ತು ಕೇರಳ ಸೇರಿದಂತೆ ಐದು ರಾಜ್ಯಗಳಿಗೆ ಭೇಟಿ ನೀಡಿ ಬಿಜೆಪಿಯನ್ನು ಸೋಲಿಸಲು ಅಲ್ಲಿನ ರೈತರಿಗೆ ಮನವಿ ಮಾಡಲಿದೆ ಎಂದು ಎಸ್‌ಕೆಎಂ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್ ಹೇಳಿದ್ದಾರೆ.

- Advertisement -