ಜೈಪುರ್: ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ಕಾರಣ ಕನ್ಹಯ್ಯಾ ಲಾಲ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) 10 ದಿನಗಳ ಕಾಲ ವಶಕ್ಕೆ ಪಡೆದಿದೆ.
ಜೈಪುರ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ ಬಂಧಿತರಾದ ನಾಲ್ವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) 10 ದಿನಗಳ ಕಾಲ ಒಪ್ಪಿಸಿದೆ.
ಆರೋಪಿಗಳನ್ನು ಮುಹಮ್ಮದ್ ರಿಯಾಜ್ , ಘೌಸ್ ಮುಹಮ್ಮದ್, ಆಸಿಫ್ ಹುಸೇನ್ ಮತ್ತು ಮೊಹ್ಸಿನ್ ಖಾನ್ ಎಂದು ಗುರುತಿಸಲಾಗಿದೆ. ನಾಲ್ವರನ್ನು ಇಂದು ಮಧ್ಯಾಹ್ನ ಜೈಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕೋರ್ಟ್ ಆವರಣದಲ್ಲಿ ಆರೋಪಿಗಳ ಮೇಲೆ ಅಲ್ಲಿ ಸೇರಿದ್ದ ಜನರು ಹಲ್ಲೆಯನ್ನು ಮಾಡಿದ್ದರು.
ಮುಹಮ್ಮದ್ ರಿಯಾಜ್ ಮತ್ತು ಘೌಸ್ ಮುಹಮ್ಮದ್ ಎಂಬಾತರು ಜೂನ್ 28 ರಂದು, ಪ್ರವಾದಿಯ ಬಗ್ಗೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಕನ್ಹಯ್ಯಾರನ್ನು ಕತ್ತು ಸೀಳಿ ಹತ್ಯೆ ಮಾಡಿದ್ದರು.