ಅಹಮದಾಬಾದ್: 2002 ರ ಗುಜರಾತ್ ನಲ್ಲಿ ನಡೆದ ಹತ್ಯಾಕಾಂಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸಾಕ್ಷಿ ಮತ್ತು ಆಧಾರಗಳನ್ನು ಸೃಷ್ಟಿಸಿದ್ದಾರೆಂಬ ಆರೋಪದಲ್ಲಿ ಬಂಧನದಲ್ಲಿರುವ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹಾಗೂ ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್ ಬಿ ಶ್ರೀಕುಮಾರ್ ಅವರಿಗೆ ಅಹಮದಾಬಾದ್ ನ ಮೆಟ್ರೋಪೋಲಿಟನ್ ನ್ಯಾಯಾಲಯವು 14 ದಿನದ ನ್ಯಾಯಾಂಗ ಬಂಧನ ಆದೇಶ ನೀಡಿದೆ.
‘ತನಿಖಾ ತಂಡವು ಹೆಚ್ಚಿನ ದಿನಗಳವರೆಗೆ ಕಸ್ಟಡಿಗೆ ನೀಡಬೇಕೆಂದು ಕೋರಲಿಲ್ಲ. ಆದ್ದರಿಂದ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ’ ಎಂದು ಮೆಟ್ರೋಪೋಲಿಟನ್ ಪ್ರಾಸಿಕ್ಯೂಟರ್ ಅಮಿತ್ ಪಟೇಲ್ ಆದೇಶಿಸಿದ್ದಾರೆ.
ಅಹಮದಾಬಾದ್ ಪೊಲೀಸ್ ಅಪರಾಧ ವಿಭಾಗವು ದಾಖಲಿಸಿದ ಎಫ್ ಐ ಆರ್ ಮೇಲೆ ತೀಸ್ತಾ ಸೆಟಲ್ವಾಡ್ ಮತ್ತು ಶ್ರೀಕುಮಾರ್ ಅವರನ್ನು ಬಂಧಿಸಲಾಗಿತ್ತು. ‘ಗಲಭೆಯ ತನಿಖಾಧಿಕಾರಿಗಳಿಗೆ ಸುಳ್ಳು ಸಾಕ್ಷಿಗಳನ್ನು ನೀಡಿ , ತನಿಖೆಯ ದಾರಿತಪ್ಪಿಸುತ್ತಿದ್ದರು’ ಎಂದು ಎಫ್ ಐ ಆರ್ ನಲ್ಲಿ ದಾಖಲಿಸಿದ್ದರು.