ಕನ್ನಡ ಪ್ರಭ ವರದಿಗಾರನ ಆತ್ಮಹತ್ಯೆ: ಸುಸೈಡ್ ನೋಟ್ ನಲ್ಲಿ ಸಚಿವ ಸುಧಾಕರ್, ಸಂಪಾದಕ ರವಿ ಹೆಗಡೆ ಹೆಸರು: ವರದಿ

Prasthutha|

ಚಿಕ್ಕಬಳ್ಳಾಪುರ/ಬೆಂಗಳೂರು: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಕನ್ನಡ ಪ್ರಭ ಪತ್ರಿಕೆಯ ಮಾಜಿ ವರದಿಗಾರ ಅಶ್ವತ್ಥ ನಾರಾಯಣರವರು ತಮ್ಮ ಸುಸೈಡ್ ನೋಟ್ ನಲ್ಲಿ ಸಚಿವ ಸುಧಾಕರ್ ಮತ್ತು ಪತ್ರಿಕೆಯ ಪ್ರಧಾನ ಸಂಪಾದಕ ರವಿ ಹೆಗಡೆ ಹೆಸರನ್ನು ಉಲ್ಲೇಖಿಸಿದ್ದರು ಎಂದು ಫ್ಲ್ಯಾಶ್ ನ್ಯೂಸ್ ವೆಬ್ ಸೈಟ್ ವರದಿ ಮಾಡಿದೆ.

- Advertisement -

ತಾನು ಆರೇಳು ತಿಂಗಳ ಹಿಂದೆಯೇ ಕನ್ನಡ ಪ್ರಭ ಪತ್ರಿಕೆಗೆ ರಾಜೀನಾಮೆ ನೀಡಿದ್ದರು. ಕೆಲಸಕ್ಕೆ ರಾಜೀನಾಮೆ ನೀಡಲು ತನ್ನನ್ನು ಒತ್ತಾಯಿಸಲಾಗಿತ್ತು. ಇದಕ್ಕೆ ಸಚಿವ ಸುಧಾಕರ್ ಕಾರಣ, ಸಚಿವರ ಮಾತು ಕೇಳಿ ಸಂಪಾದಕ ರವಿ ಹೆಗಡೆ ಇಂತದ್ದೊಂದು ಕೆಲಸ ಮಾಡಿದ್ದರು ಎಂದು ಅವರು ಸುಸೈಡ್ ನೋಟ್ ನಲ್ಲಿ ಬರೆದಿರುವುದಾಗಿ  ವರದಿಯು ತಿಳಿಸಿದೆ.

ತಾನು ಯಾವುದೇ ವರದಿ ಅಥವಾ ಲೇಖನ ಕಳಿಸಿದರೂ ಅದನ್ನು ಪ್ರಕಟಿಸದಂತೆ ಸಂಪಾದಕರು ತಡೆಹಿಡಿಯುತ್ತಿದ್ದರು ಮತ್ತು ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಸುಸೈಡ್ ನೋಟ್ ನಲ್ಲಿ ಉಲ್ಲೇಖಿಸಿದ್ದರು ಎಂದು ಹೇಳಲಾಗಿದೆ.

Join Whatsapp