ಅಯೋಧ್ಯೆ: ‘ಆಝಾದಿ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಪ್ರಕರಣ

Prasthutha|

ಹೊಸದಿಲ್ಲಿ: ವಿದ್ಯಾರ್ಥಿ ಒಕ್ಕೂಟ ಚುನಾವಣೆ ನಡೆಸಬೇಕೆಂದು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ‘ಆಝಾದಿ’ ಘೋಷಣೆಗಳನ್ನು ಕೂಗಿದ ಅಯೋಧ್ಯೆಯ ಸಾಕೇತ್ ಪದವೀಯೋತ್ತರ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ದೇಶದ್ರೋಹ ಮತ್ತು ಇತರ ಪ್ರಕರಣಗಳನ್ನು ಹೇರಲಾದ ಘಟನೆ ನಡೆದಿದೆ.

- Advertisement -

13 ವಿದ್ಯಾರ್ಥಿಗಳ ವಿರುದ್ಧ ಅಯೋಧ್ಯೆ ಕಾಲೇಜಿನ ಪ್ರಾಂಶುಪಾಲ ಎನ್.ಡಿ.ಪಾಂಡೆ ಡಿಸೆಂಬರ್ 23ರಂದು ಕೊಥ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಅದೇ ದಿನ ಠಾಣಾಧಿಕಾರಿ ಅಶುತೋಶ್ ಮಿಶ್ರಾ ಆರು ವಿದ್ಯಾರ್ಥಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದರು. ಡಿಸೆಂಬರ್ 16ರಂದು ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ‘ಹಮ್ ಲೇಕೆ ರಹೇಂಗೆ ಆಝಾದಿ’ ಎಂದು ಘೋಷಣೆ ಕೂಗಿದ್ದರೆಂದು  ಮುಖ್ಯಶಿಕ್ಷಕರು ದೂರಿನಲ್ಲಿ ಆರೋಪಿಸಿದ್ದರು.

ವಿದ್ಯಾರ್ಥಿಗಳು ತಮ್ಮ ವಿರುದ್ಧದ ದೇಶದ್ರೋಹ ಆರೋಪವನ್ನು ನಿರಾಕರಿಸಿದ್ದಾರೆ. ತಾವು ಪ್ರಾಂಶುಪಾಲರು ಮತ್ತು ಕಾಲೇಜಿನ ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ  ‘ಆಝಾದಿ’ (ಸ್ವಾತಂತ್ರ್ಯ)ಗಾಗಿ ಬೇಡಿಕೆಯಿಟ್ಟಿದ್ದೆವು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

- Advertisement -

ಪೊಲೀಸರು ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ, ಗಲಭೆ, ಸಾರ್ವಜನಿಕ ಅಧಿಕಾರಿಯ ಮೇಲೆ ಹಲ್ಲೆ, ಅಪಾರಾಧ ಬೆದರಿಕೆ ಮತ್ತು ಭಾರತೀಯ ದಂಡ ಸಂಹಿತೆಯ ಇತರ ಆರೋಪಗಳಡಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

Join Whatsapp