ಏನಿದು ಟಿ.ಆರ್.ಪಿ?

Prasthutha|

ಟಿ.ಆರ್.ಪಿ ಅಂದರೆ ಟೆಲಿವಿಶನ್ ರೇಟಿಂಗ್ ಪಾಯಿಂಟ್. ಯಾವುದೇ ಚಾನೆಲ್ ಅಥವಾ ಕಾರ್ಯಕ್ರಮದ ವೀಕ್ಷಣೆಯ ಆಧಾರದಲ್ಲಿ ಟಿ.ಆರ್.ಪಿ ನಿಗದಿಯಾಗುತ್ತದೆ. ಟಿ.ಆರ್.ಪಿ ದರದ ಆಧಾರದಲ್ಲಿ ಒಂದು ಚಾನೆಲ್ ನ ಟಿ.ಆರ್.ಪಿಯನ್ನು ಲೆಕ್ಕಹಾಕಲಾಗುತ್ತದೆ. ವಿವಿಧ ಭೌಗೋಳಿಕ ಮತ್ತು ಜನಸಂಖ್ಯಾ ವಲಯಗಳ ಒಟ್ಟು ಟಿ.ವಿ ಮಾಲೀಕರಿಂದ ಮಾದರಿಯಾಗಿ ಈ ಸಂಖ್ಯೆಗಳನ್ನು ಪರಿಗಣಿಸಲಾಗುತ್ತದೆ.

- Advertisement -

ಜನರ ಮನಸ್ಥಿತಿಯನ್ನು ಅರ್ಥೈಸಲು ಜಾಹೀರಾತುದಾರರು ಮತ್ತು ಹೂಡಿಕೆದಾರರಿಗೆ ಟಿ.ಆರ್.ಪಿ ನೆರವಾಗುತ್ತದೆ. ಒಂದು ಟಿ.ವಿ ಚಾನೆಲ್ ಅಥವಾ ಕಾರ್ಯಕ್ರಮದ ಟಿ.ಆರ್.ಪಿಯ ಆಧಾರದಲ್ಲಿ  ಜಾಹಿರಾತುದಾರರು ಎಲ್ಲಿ ತಮ್ಮ ಜಾಹಿರಾತನ್ನು ಪ್ರದರ್ಶಿಸಬೇಕು ಮತ್ತು ಹೂಡಿಕೆದಾರರು ಎಲ್ಲಿ ತಮ್ಮ ಹಣವನ್ನು ಹೂಡಬೇಕು ಎಂದು ನಿರ್ಧರಿಸುತ್ತಾರೆ.

ಟಿ.ಆರ್.ಪಿ ಕುರಿತು

- Advertisement -

ವೀಕ್ಷಕತ್ವದ ಅಳತೆ ಮಾಡಲು ಮಾರುಕಟ್ಟೆ ಮತ್ತು ಜಾಹಿರಾತು ಸಂಸ್ಥೆಗಳು ಟಾರ್ಗೆಟ್ ರೇಟಿಂಗ್ ಪಾಯಿಂಟ್ ದರ ಅಥವಾ ಟಿ.ಆರ್.ಪಿಯನ್ನು ಒಂದು ಮಾಪನವನ್ನಾಗಿ ಬಳಸುತ್ತಾರೆ. ಯಾವ ಕಾರ್ಯಕ್ರಮಗಳು ಹೆಚ್ಚಾಗಿ ವೀಕ್ಷಿಸಲ್ಪಡುತ್ತದೆ ಎಂದು ತೀರ್ಮಾನಿಸಲು ಮತ್ತು ವೀಕ್ಷಕರ ಆಯ್ಕೆಯನ್ನು ಸೂಚಿಸಲು ಟಿ.ಆರ್.ಪಿ ಅಥವಾ ಟೆಲಿವಿಶನ್ ರೇಟಿಂಗ್ ಪಾಯಿಂಟ್ ಒಂದು ಸಾಧನವಾಗಿದೆ. ಅದು ಟಿ.ವಿ ಚಾನೆಲ್ ಅಥವಾ ಕಾರ್ಯಕ್ರಮದ ಜನಪ್ರಿಯತೆಯನ್ನು ತೋರಿಸುತ್ತದೆ. ಒಂದು ನಿರ್ದಿಷ್ಟ ಚಾನೆಲ್ ಅಥವಾ ನಿರ್ದಿಷ್ಟ ಕಾರ್ಯಕ್ರಮವನ್ನು ಎಷ್ಟು ಬಾರಿ ಜನರು ವೀಕ್ಷಿಸುತ್ತಾರೆ ಎಂಬ ಮಾಹಿತಿಯನ್ನು ಒದಗಿಸುತ್ತದೆ.

ಟಿ.ಆರ್.ಪಿ ಹೇಗೆ ಲೆಕ್ಕ ಹಾಕಲಾಗುತ್ತದೆ:

ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) “ಬಾರ್-ಒ-ಮೀಟರ್”ಗಳನ್ನು ಬಳಸಿ ಟಿ.ಆರ್.ಪಿಯನ್ನು ಲೆಕ್ಕಹಾಕುತ್ತದೆ. ಬಾರ್ಕ್ ಎಲ್ಲಾ ಗುರುವಾರದಂದು ಟಿ.ಆರ್.ಪಿ ಫಲಿತಾಂಶ ಬಿಡುಗಡೆಗೊಳಿಸಿ ಟಿವಿ ಚಾನೆಲ್ ಮತ್ತು ಟಿ.ವಿ ಕಾರ್ಯಕ್ರಮಗಳ ರಾಂಕಿಂಗ್ ಪ್ರಕಟಿಸುತ್ತದೆ.

ಬಾರ್ಕ್ ‘ಬಾರ್-ಒ-ಮೀಟರ್”ಗಳನ್ನು ಆಯ್ದ ಸುಮಾರು 45000 ಮನೆಗಳಿಗೆ ಅಳವಡಿಸುತ್ತದೆ. ಈ ಸಲಕರಣೆಯು ಕುಟುಂಬ ಸದಸ್ಯರು ಅಥವಾ ಆಯ್ದ ಜನರು ಯಾವ ಚಾನೆಲನ್ನು ಅಥವಾ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ ಎಂಬ ವಿವರವನ್ನು ದಾಖಲಿಸಿಡುತ್ತದೆ. ಈ ವಿಧಾನಕ್ಕೆ ಪೀಪಲ್ ಮೀಟರ್ ಎಂದು ಕರೆಯಲಾಗುತ್ತದೆ.

ಪಿಕ್ಚರ್ ಮ್ಯಾಚಿಂಗ್ ಎಂಬ ಇನ್ನೊಂದು ವಿಧಾನವೂ ಇದರಲ್ಲಿದೆ. ಈ ವಿಧಾನದಲ್ಲಿ ಪೀಪಲ್ ಮೀಟರ್ ಟಿವಿಯಲ್ಲಿ ವೀಕ್ಷಿಸಲ್ಪಡುವ ಚಿತ್ರದ ಸಣ್ಣ ಭಾಗವನ್ನು ದಾಖಲಿಸಿಟ್ಟುಕೊಳ್ಳುತ್ತದೆ. ಚಿತ್ರಗಳ ರೂಪದಲ್ಲಿರುವ ಈ ವಿವರವನ್ನು ಪಡೆದು ಟಿ.ಆರ್.ಪಿ ಲೆಕ್ಕಹಾಕುವುದಕ್ಕಾಗಿ ವಿಶ್ಲೇಷಿಸಲಾಗುತ್ತದೆ.

ಏನಿದು ಬಾರ್ಕ್:

ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್)ಅನ್ನು 2014ರಲ್ಲಿ ಸ್ಥಾಪಿಸಲಾಗಿದ್ದು, ಇದು ಜಗತ್ತಿನ ಅತೀ ದೊಡ್ಡ ಟೆಲಿವಿಶನ್ ಶೋತೃಗಳ ಮಾಪನ ಮಾಡುವ ಸೇವೆಯಾಗಿದೆ. ಟ್ಯಾಮ್ ಇಂಡಿಯಾದೊಂದಿಗೆ ಜಂಟಿ ಉದ್ಯಮವನ್ನು ಆರಂಭಿಸಿದ ಬಳಿಕ ದೇಶದಲ್ಲಿ ದೂರದರ್ಶನ ವಲಯದ ಏಕೈಕ ರೇಟಿಂಗ್ ಮಂಡಳಿಯಾಗಿದೆ. 277 ಚಾನೆಲ್ ಗಳ ಚಂದಾದಾರಿಕೆಯೊಂದಿಗೆ ಬಾರ್ಕ್ ಇಂಡಿಯಾ ಆರಂಭಗೊಂಡಿದ್ದು, ಪ್ರಸ್ತುತ ಅದು 470 ದಾಟಿದೆ.

Join Whatsapp