ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟ: 7ವರ್ಷದ ಬಾಲಕ ಸಾವು

Prasthutha|

ಮುಂಬಯಿ: ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡು ಏಳು ವರ್ಷದ ಬಾಲಕನೋರ್ವ ಮೃತಪಟ್ಟಿರುವ ದಾರುಣ ಘಟನೆ ನಗರದ ಹೊರವಲಯದ ವಸಾಯಿಯಲ್ಲಿ ನಡೆದಿದೆ.

- Advertisement -

ಶಬ್ಬೀರ್ ಶಹನವಾಜ್ ಅನ್ಸಾರಿ ಎಂಬಾತನೇ ಮೃತ ಬಾಲಕ. ರಾಮದಾಸ್ ನಗರದ ನಿವಾಸಿ ಶಹನವಾಜ್ ಅನ್ಸಾರಿ ಎಂಬುವರು ಸೆ.23ರಂದು ಬೆಳಗಿನಜಾವ 2.30ರ ಸುಮಾರಿಗೆ ತಮ್ಮ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿಯನ್ನು ಚಾರ್ಜ್ ಮಾಡಲು ಮನೆಯ ಹಾಲ್‌ನಲ್ಲಿ ಇಟ್ಟಿದ್ದರು. ಆದರೆ, ಬೆಳಗಿನ ಜಾವ 5:30ರ ಸುಮಾರಿಗೆ ಬ್ಯಾಟರಿ ಸ್ಫೋಟಗೊಂಡಿದೆ.

ಸ್ಕೂಟರ್‌ನ ಬ್ಯಾಟರಿ ಸ್ಫೋಟಿಸಿದ ಪರಿಣಾಮ ಸಭಾಂಗಣದಲ್ಲಿ ಮಲಗಿದ್ದ ಬಾಲಕ ಶಬ್ಬೀರ್ ಹಾಗೂ ತಾಯಿ ರುಕ್ಸಾನಾ ಗಾಯಗೊಂಡಿದ್ದು,ಅದರಲ್ಲೂ ಶಬ್ಬೀರ್​ ಶೇ.70ರಿಂದ 80ರಷ್ಟು ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಈ ಸಾವಿಗೆ ಸ್ಕೂಟಿ ಕಂಪನಿಯೇ ಕಾರಣ ಎಂದು ಮೃತ ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ.

Join Whatsapp