ಉಡುಪಿ: ಭೌದ್ಧ ಮಹಾಸಭಾ ವತಿಯಿಂದ ಅಂಬೇಡ್ಕರ್ ಚಕ್ರ ಪ್ರವರ್ತನಾ ದಿನ: 50ಕ್ಕು ಹೆಚ್ಚು ದಲಿತರಿಂದ ಬೌದ್ಧ ಧರ್ಮ ಸ್ವೀಕಾರ

Prasthutha|

ಉಡುಪಿ: ಉಡುಪಿ ಜಿಲ್ಲಾ ಭೌಧ್ಧ ಮಹಾ ಸಭಾದ ಅಂಗವಾಗಿ ಅ.8 ರಂದು ಬಾಬಾಸಾಹೇಬ್ ಅಂಬೇಡ್ಕರ್ ರವರ 64 ನೇ ಧಮ್ಮ ಚಕ್ರ ಪ್ರವರ್ತನಾ ದಿನವನ್ನು ಆಚರಿಸಲಾಯಿತು. ಈ ಅಪೂರ್ವ ಸಮಾರಂಭದಲ್ಲಿ ಸುಮಾರು 50 ಕ್ಕೂ ಹೆಚ್ಚು ದಲಿತರು ಭೌಧ್ಧ ಧರ್ಮಕ್ಕೆ ಮತಾಂತರ ಗೊಂಡರು.

- Advertisement -

ಜೀವನ ಬುಧ್ಧ ವಿಹಾರ ಕೊಳ್ಳೆಗಾಲ , ಮೈಸೂರು ಇಲ್ಲಿಂದ ಆಗಮಿಸಿದ ಪೂಜ್ಯ ಸುಗತಪಾಲ ಭಂತೇಜಿ ಯವರು ಮತಾಂತರಗೊಂಡವರಿಗೆ ಪ್ರಮಾಣವಚನ ಬೋಧಿಸಿದರು. ಭೌಧ್ಧ ಧರ್ಮಕ್ಕೆ  ಮತಾಂತರಗೊಂಡ ಭೌಧ್ಧರು ತಮ್ಮ ಬಲಕೈಯನ್ನು ಮುಂದಕ್ಕೆ ಚಾಚಿ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಉಡುಪಿ ಜಿಲ್ಲೆಯಲ್ಲಿ ಪದವಿಪೂರ್ವ ಮತ್ತು ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸುಮಾರು30 ಕ್ಕೂ ಹೆಚ್ಚು ವಿಧ್ಯಾರ್ಥಿ ಗಳಿಗೆ ಸಹಾಯ ಧನ ನೀಡಿ ಸನ್ಮಾನಿಸಲಾಯಿತು.

ಉಡುಪಿ ಜಿಲ್ಲೆಯ ಎಲ್ಲಾ ದಲಿತ ಅಂಬೇಡ್ಕರ್ ಅನುಯಾಯಿ ಮುಂಚೂಣಿ ನಾಯಕರಾದ ಶೀ.ಸುಂದರ ಮಾಸ್ತರ್ , ಶ್ರೀ. ಶ್ಯಾಮರಾಜ್ ಬಿರ್ತಿ , ನಾರಾಯಣ ಮಣೂರು , ಶೇಖರ್ ಹೆಜಮಾಡಿ ,  ಶೇಖರ ಹಾವಂಜೆ , ಶಂಭು ಮಾಸ್ಟರ್, ಮಂಜುನಾಥ್ ಗಿಳಿಯಾರು , ಅಣ್ಣಪ್ಪ ನಕ್ರೆ , ಶ್ಯಾಮಸುಂದರ್ ತೆಕ್ಕಟ್ಟೆ , ಮಂಜುನಾಥ್. ವಿ. (ವಕೀಲರು) , ಕೀರ್ತಿ ಪಡುಬಿದ್ರಿ , ವಿಠಲ ತೊಟ್ಟಂ , ರವೀಂದ್ರ ಬಂಟಕಲ್ಲು , ರಾಘವೇಂದ್ರ ಬೆಳ್ಳೆ , ರಾಜೇಂದ್ರ ಬೆಳ್ಳೆ , ಭಾಸ್ಕರ್ ಮಾಸ್ತರ್ ಕುಂಜಿಬೆಟ್ಟು , ವಿಠಲ ಉಚ್ಚಿಲ , ಗೋಪಾಲಕ್ರಷ್ಣ ಕುಂದಾಪುರ , ಮಂಜುನಾಥ ಬಾಳ್ಕುದ್ರು , ಸುರೇಶ ಬಾರ್ಕೂರು , ಕ್ರಷ್ಣ LIC , ಪರಮೇಶ್ವರ್ ಉಪ್ಪೂರು ,        ಅಜಯ ಕುಮಾರ್ , ಆನಂದ ಬ್ರಹ್ಮಾವರ , ಮುರಳಿ , ಪುಷ್ಪಕರ ,  ರಮೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -

ಬುಧ್ಧ ಮತ್ತು ಅವರ ಧಮ್ಮ ವಿಷಯದ ಮೇಲೆ ಭಾಸ್ಕರ್ ವಿಟ್ಲರವರು ಉಪನ್ಯಾಸ ನೀಡಿದರು.



Join Whatsapp