ಜೆರುಸಲೇಂ: ದಕ್ಷಿಣ ಇಸ್ರೇಲ್ ಪ್ರಾಂತ್ಯಕ್ಕೆ ಇಂದು ಪ್ಯಾಲೆಸ್ತೀನ್ ನ ಗಾಝಾ ಪಟ್ಟಿಯಿಂದ ರಾಕೆಟ್ ದಾಳಿ ನಡೆಸಿದ್ದು, ಮತ್ತೆ ದ್ವಿರಾಷ್ಟ್ರಗಳಲ್ಲಿ ಉದ್ವಿಗ್ನತೆ ಉಂಟಾಗಿದೆ.
ಇಸ್ರೇಲ್ ಶಸ್ತ್ರಾಸ್ತ್ರ ಪಡೆಗಳು ಪ್ಯಾಲೆಸ್ತೀನ್ ನಿವಾಸಿಗಳ ಮೇಲೆ ಕಳೆದ ಹಲವು ವರ್ಷಗಳಿಂದ ಭೀಕರ ಯುದ್ಧ ಸಾರುತ್ತಾ ಬಂದಿದ್ದು, ಕಳೆದ ಎರಡು ತಿಂಗಳಿನಿಂದೀಚೆಗೆ ಯುದ್ಧಕ್ಕೆ ವಿರಾಮ ಹಾಕಿತ್ತು. ಆದರೆ ಇಂದು ಗಾಜಾ ಪಟ್ಟಿಯಿಂದ ಉಡಾಯಿಸಿ ರಾಕೆಟ್ ದಾಳಿ ಮಾಡಿದ್ದರ ಪರಿಣಾಮ ಮತ್ತೆ ಇಸ್ರೇಲ್ ಪ್ರತೀಕಾರದ ಎಚ್ಚರಿಕೆಯನ್ನು ನೀಡಿದ್ದು, ಪ್ಯಾಲೆಸ್ತೀನ್ ಮೇಲೆ ವೈಮಾನಿಕ ದಾಳಿ ನಡೆಸಿದೆ.
ಈ ದಾಳಿಯ ಹಿಂದೆ ಹಮ್ಮಾಸ್ ಕೈವಾಡ ಇದೆ. ಗಾಝಾ ಪಟ್ಟಿಯಲ್ಲಿರುವ ಮೂರು ಮಿಲಿಟರಿ ಪೋಸ್ಟ್ ಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ಮಾಡಿದೆ. ಹಮ್ಮಾಸ್ ನ ನಿವಾಸಿ ಪ್ರದೇಶಗಳನ್ನೇ ಗುರಿಪಡಿಸಲಾಗಿದೆ ಎಂದು ಇಸ್ರೇಲ್ ಮೂಲಗಳು ತಿಳಿಸಿವೆ.
ಪ್ಯಾಲೆಸ್ತೀನ್ ಕಡೆಯಿಂದ ದಕ್ಷಿಣ ಇಸ್ರೇಲ್ ಕಡೆ ದಾಳಿ ಮಾಡಿದ ರಾಕೆಟನ್ನು ವೈಮಾನಿಕ ಮಿಲಿಟರಿ ಪಡೆಯ ಮೂಲಕ ತಡೆಯಲಾಯಿತು. ಯಾವುದೇ ಸಾವು ನೋವುಗಳು ಸಂಭವಿಸಲಿಲ್ಲ ಎಂದೂ ತಿಳಿಸಿವೆ.