ಇರಾನ್ ಮೇಲೆ ದಾಳಿ ಗೆ ಯೋಜನೆ ರೂಪಿಸಿದ್ದ ಡೊನಾಲ್ಡ್ ಟ್ರಂಪ್

Prasthutha|

ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದರೆಂದು ವರದಿಯಾಗಿದೆ. ಜೋ ಬಿಡೆನ್ ಗೆ ಅಧಿಕಾರವನ್ನು ಹಸ್ತಾಂತರಿಸುವ ಮೊದಲು ಇರಾನ್ ನ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡುವ ಯೋಜನೆಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಈ ನಿರ್ಧಾರವನ್ನು ನಾಟಕೀಯವಾಗಿ ಹಿಂತೆಗೆದುಕೊಳ್ಳಲಾಯಿತು. ಡೊನಾಲ್ಡ್ ಟ್ರಂಪ್ ಇನ್ನೂ ಚುನಾವಣಾ ತೀರ್ಪನ್ನು ಒಪ್ಪಿಕೊಂಡಿಲ್ಲ. ಈ ಪರಿಸ್ಥಿತಿಯಲ್ಲಿ ಬೈಡನ್ ರ ವಿದೇಶಾಂಗ ನೀತಿಯನ್ನು ದುರ್ಬಲಗೊಳಿಸುವುದು ಇದರ ಉದ್ದೇಶವಾಗಿತ್ತು.

- Advertisement -

ಓವಲ್ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಟ್ರಂಪ್ ಇರಾನ್ ಮೇಲಿನ ದಾಳಿಯ ಸಾಧ್ಯತೆಯನ್ನು ಉಪಾಧ್ಯಕ್ಷ ಮೈಕ್ ಪೆನ್ಸ್, ಸ್ಟೇಟ್ ಸೆಕ್ರೆಟರಿ ಮೈಕ್ ಪೋಂಪಿಯೋರೊಂದಿಗೆ ಚರ್ಚೆ ನಡೆಸಿದ್ದರು. ಯಾವ ರೀತಿಯಾಗಿ ದಾಳಿ ಮಾಡಬಹುದೆಂದು ಟ್ರಂಪ್ ಸೂಚಿಸಿದ್ದರು. ಆದರೆ ಸಲಹೆಗಾರರು ದಾಳಿ ಮಾಡುವುದು ಬೇಡ ಎಂದು ಹೇಳಿದ್ದರು. ಈ ದಾಳಿಯು ದೊಡ್ಡ ಗಂಡಾಂತರವನ್ನುಂಟು ಮಾಡಿ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದೆಂದು ಅವರು ಹೇಳಿದ್ದರು. ಇದರೊಂದಿಗೆ ಟ್ರಂಪ್ ಈ ನಿರ್ಧಾರದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ಬಗ್ಗೆ ಶ್ವೇತಭವನದ ಮೂಲಗಳಾಗಲಿ, ಡೊನಾಲ್ಡ್ ಟ್ರಂಪ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದರ ನಡುವೆ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಗೆದ್ದಿರುವುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಆದರೆ ಈ ಟ್ವೀಟ್ ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ಸ್ವತಃ ಟ್ವಿಟ್ಟರ್ ಸ್ಪಷ್ಟಪಡಿಸಿದೆ. ಟ್ರಂಪ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಅಧಿಕೃತ ವಲಯಗಳು ನೀಡಿದ ಫಲಿತಾಂಶವು ವಿಭಿನ್ನವಾಗಿದೆ ಎಂದು ಟ್ವಿಟ್ಟರ್ ವಿವರಿಸಿದೆ.



Join Whatsapp