ಕ್ಯಾಲಿಫೋರ್ನಿಯಾ: ಇತ್ತೀಚೆಗೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ಕುಟುಂಬವೊಂದನ್ನು ಅಪಹರಿಸಿ ಕೊಲೆಗೈದವ ಸೆರೆ ಸಿಕ್ಕಿದ್ದು, ಆರೋಪಿಯನ್ನು ಜೀಸಸ್ ಸಲ್ಗಾಡೋ ಎಂದು ಗುರುತಿಸಲಾಗಿದೆ.
ಸಾಮೂಹಿಕ ಕೊಲೆಗೈದ ಈತನ ಇನ್ನೊಂದು ಇದೇ ಬಗೆಯ ಕರಾಳ ಇತಿಹಾಸ ಬಯಲಾಗಿದೆ. ಈತ ಸುಮಾರು 17 ವರ್ಷದ ಹಿಂದೆ ಕುಟುಂಬವೊಂದನ್ನು ಇದೇ ಬಗೆಯಲ್ಲಿ ಅಪಹರಿಸಿದ್ದ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿ ಈತನನ್ನು ಆ ಸಮಯದಲ್ಲಿ ಬಂಧಿಸಲಾಗಿತ್ತು. ಆ ಬಳಿಕ ಬಿಡುಗಡೆಗೊಂಡಿದ್ದ ಎನ್ನಲಾಗಿದೆ. ಇದಾದ ನಂತರ ಇನ್ನೊಂದು ಘಟನೆಯನ್ನು ಅಪಹರಿಸುವ ಮೂಲಕ ಮತ್ತೆ ಜೈಲು ಸೇರಿದ್ದಾನೆ.