ದರ್ಬ್ ಟ್ರಾಫಿಕ್ ಟೋಲ್ ವ್ಯವಸ್ಥೆಯಲ್ಲಿ ನೋಂದಾಯಿಸದ ವಾಹನ ಮಾಲೀಕರು ಜ. 2ರ ಶನಿವಾರದೊಳಗಾಗಿ ಖಾತೆಯನ್ನು ತೆರೆದು ಕ್ರಿಯಾಶೀಲಗೊಳಿಸುವಂತೆ (Activate) ಅಬುಧಾಬಿಯ ಸಮಗ್ರ ಸಾರಿಗೆ ಕೇಂದ್ರ (ಐಟಿಸಿ) ಸೂಚಿಸಿದೆ. ಹಾಗೆ ಮಾಡಲು ವಿಫಲರಾದವರು ರಾಜಧಾನಿಯಲ್ಲಿ ಟೊಲ್ ಗೇಟ್ ಬಳಸಿದ ಕಾರಣಕ್ಕೆ ದಂಡವನ್ನು ಪಾವತಿಸಬೇಕಾಗಬಹುದು.
ಖಾತೆ ತೆರೆದು ವಾಹನವನ್ನು ನೋಂದಾಯಿಸುವ ಪ್ರಕ್ರಿಯೆ ಸುಲಭವಾದುದು.
ದರ್ಬ್ ಟೋಲ್ ಗೇಟ್ ಬಳಸುವುದಕ್ಕೆ ಮುಂಚೆ ತಿಳಿದಿರಬೇಕಾಗಿರುವ ವಿಷಯಗಳು ಇಲ್ಲಿವೆ:
- ನೋಂದಾಯಿಸಿಕೊಳ್ಳುವುದಕ್ಕಾಗಿ www.darb.itc.gov.ae ವೆಬ್ ಸೈಟ್ ಅಥವಾ ಸ್ಮಾರ್ಟ್ ಫೋನ್ ಗಳಿಗಿರುವ ದರ್ಬ್ ಆಪನ್ನು ಬಳಸಿರಿ
- ಒಂದು ವಾಹನದ ನೋಂದಾವಣಾ ಶುಲ್ಕ 100 ದಿರ್ಹಂ ಮತ್ತು 50 ದಿರ್ಹಂ ಬಳಕೆದಾರರ ಖಾತೆಯಲ್ಲಿಉಳಿಯಲಿದೆ.
- ಅಬೂಧಾಬಿ ನಗರಕ್ಕೆ ತೆರಳುವ ಸೇತುವೆಗಳ ಮೇಲೆ ಇರುವ ನಾಲ್ಕು ಗೇಟುಗಳ ಮೂಲಕ ಶುಲ್ಕವು ಅನ್ವಯವಾಗಲಿದೆ. ಆ ಸೇತುವೆಗಳು ಶೇಖ್ ಝಾಯೆದ್ ಸೇತುವೆ, ಶೇಖ್ ಖಲೀಫಾ ಸೇತುವೆ, ಅಲ್ ಮಕ್ತಾ ಸೇತುವೆ ಮತ್ತು ಮುಸ್ಸಫಾ ಸೇತುವೆ.
- ಶನಿವಾರದಿಂದ ಗುರುವಾರದ ತನಕ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯ ತನಕ ಮತ್ತು ಸಂಜೆ 5 ಗಂಟೆಯಿಂದ 7 ಗಂಟೆಯ ತನಕ ಟೋಲ್ ಗೇಟ್ ದಾಟುವ ವಾಹನಗಳಿಗೆ 4 ದಿರ್ಹಂ ವಿಧಿಸಲಾಗುವುದು. ಒಂದು ವಾಹನಕ್ಕೆ ಗರಿಷ್ಠ ಶುಲ್ಕ 16 ದಿರ್ಹಂ ಗರಿಷ್ಠವೆಂದರೆ ವಿಧಿಸಬಹುದಾಗಿದೆ.
- ಮೇಲೆ ತಿಳಿಸಲಾದ ಸಮಯವಲ್ಲದ ವೇಳೆ, ಶುಕ್ರವಾರ ಮತ್ತು ಸಾರ್ವಜನಿಕ ರಜಾ ದಿನದಲ್ಲಿ ಶುಲ್ಕ ಅನ್ವಯವಾಗದು.
- ಬಳಕೆದಾರನ ಪ್ರೀಪೈಡ್ ಮಾಡಿಡಲಾದ ಎಲೆಕ್ಟ್ರಾನಿಕ್ ಪೇಮೆಂಟ್ ವಾಲೆಟ್ ನ ಖಾತೆಯಿಂದ ಸ್ವಯಂಚಾಲಿತವಾಗಿ ಶುಲ್ಕವು ಕಡಿತಗೊಳ್ಳುತ್ತದೆ.
- ವಾಹನದ ಮೇಲೆ ಟೋಲ್ ಗೇಟ್ ಸ್ಟಿಕ್ಕರ್ ಅಳವಡಿಸುವ ಅಗತ್ಯವಿರುವುದಿಲ್ಲ.